ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ.
ಮಾನಸಗಂಗೋತ್ರಿಯಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಅಡ್ಡಲಾಗಿ ಎರಡು ಶಾಮಿಯಾನದ ಮಳಿಗೆಗಳನ್ನು ಅಳವಡಿಸಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮತ್ತು ಇಂತಹ ಪ್ರಮುಖ ಕಾರ್ಯಕ್ರಮ ನಡೆಯುತ್ತಿದ್ದರೂ ಅಂಬೇಡ್ಕರ್ ಪ್ರತಿಮೆಗೆ ವಿದ್ಯುತ್ ದೀಪಾಲಂಕಾರ ಮಾಡದೆ ಇರುವುದು ಮೈಸೂರು ವಿವಿ ಆಡಳಿತಕ್ಕೆ ಶೋಭೆ ತರುವಂತಹದಲ್ಲ.
ಕೂಡಲೇ ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವಾಗ ಗಣ್ಯರ ಪ್ರತಿಮೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವುದು ಅಪೇಕ್ಷಣೀಯ. ಜೊತೆಗೆ ಗಣ್ಯರ ಸ್ಮಾರಕಗಳ ಮುಂದೆ ಹಾಕಿರುವ ಶಾಮಿಯಾನ ಮಳಿಗೆಗಳನ್ನು ತೆರವುಗೊಳಿಸಿದರೆ ಉತ್ತಮ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು


