ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಒಬ್ಬ ವೀರನೇ ಸರಿ. ಉಗ್ರ ಮನಸ್ಥಿತಿಯ ಸಹ ಪೈಲಟ, ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿದ.
ಸಹ ಪೈಲಟ್ ವಿಮಾನವನ್ನು ನೆಲಕ್ಕೆ ಅಪ್ಪಳಿಸದಂತೆ ಅಥವಾ ಹೈಜಕ್ ಮಾಡದಂತೆ ತೀವ್ರವಾಗಿ ಪ್ರತಿರೋಧ ಒಡ್ಡಿದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಕಾರ್ಯ ಶ್ಲಾಘನೀಯ.
ಕಂಟ್ರೋಲ್ ರೂಮ್‌ನ ಕಿರುಚಾಟ ಕೇಳಿ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಇತರೆ ಸಿಬ್ಬಂದಿಗಳು ದಾಳಿಕೋರನನ್ನು ಹಿಡಿದದ್ದು ಸಕಾಲಿಕವಾದ ಕ್ರಮವಾಗಿದೆ. ಒಟ್ಟಿನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಿ ಮಾಡಿ ೧೮೦ ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿರುವುದು ಮೆಚ್ಚುವಂತಹ ಸಾಹಸ ಕಾರ್ಯವೇ ಸರಿ.
-ಬೆಸಗರಹಳ್ಳಿ ರವಿಪ್ರಸಾದ್,ಮೈಸೂರು



