ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ.
ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ ಕೊಟ್ಟಿದ್ದೇವೆ. ಅವರು ಕೂಡ ಬಹಳ ಸಂತೋಷದಿಂದ ಆಹ್ವಾನ ಸ್ವೀಕರಿಸಿದರು. ದಸರಾಗೆ ಸಂಪೂರ್ಣ ಸಹಕಾರ ಕೊಡೋದಾಗಿ ಹೇಳಿದ್ದಾರೆ. ಸಲಹೆ ಅಂತೇನೂ ಕೇಳಿಲ್ಲ ಎಂದು ಹೇಳಿದರು.




