Mysore
23
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಸಮಾಜವನ್ನು ಜಾಗೃತಗೊಳಿಸುವ ಚಿತ್ರಗಳನ್ನು ದುನಿಯಾ ವಿಜಿ ಹೆಚ್ಚಾಗಿ ನಿರ್ದೇಶಿಸಲಿ

ಓದುಗರ ಪತ್ರ

ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ ಜನರ ಪ್ರೋತ್ಸಾಹ ಇದೆ ಎಂಬುದನ್ನು ಹಲವು ಚಿತ್ರಗಳು ತೋರಿಸಿವೆ.

ಸಮಾಜಿಕ ಸಮಸ್ಯೆಗಳ ಹಿನ್ನೆಲೆಯಿರುವ ಕಥೆಯೊಂದು ಚಿತ್ರವಾದರೆ ಅದಕ್ಕೆ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದನ್ನು ನಿರ್ದೇಶಕ ಕಂ ನಟ ವಿಜಯಕುಮಾರ್ ಅಲಿಯಾಸ್ ದುನಿಯಾ ವಿಜಿ ಅವರು ತಮ್ಮ ಹಿಂದಿನ ‘ಸಲಗ’ ಮತ್ತು ‘ಭೀಮ’ ಚಿತ್ರದಲ್ಲಿ ತೋರ್ಪಡಿಸಿದ್ದು ಅದೇ ರೀತಿ ಇತ್ತೀಚೆಗೆ ತೆರೆಗೆ ಬಂದ ‘ಸಿಟಿಲೈಟ್ಸ್’ ಚಿತ್ರದಲ್ಲೂ ಪ್ರಮುಖ ವಿಷಯವೊಂದಕ್ಕೆ ಒತ್ತು ನೀಡಿ ಸಮಾಜಕ್ಕೆ ಸಂದೇಶ ನೀಡಿರುವುದು ಅವರ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ.

ಇನ್ನು ಮುಂದೆಯೂ, ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಆಧರಿಸಿ ಚಿತ್ರಗಳನ್ನು ವಿಜಿ ಅವರು ನಿರ್ದೇಶಿಸುವ ಮೂಲಕ ಸಮಾಜವನ್ನು ಜಾಗೃತಗೊಳಿಸಲಿ.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!