ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದು ಗ್ರಾಹಕರ ದೃಷ್ಟಿಯಿಂದ ಬೇಜವಾಬ್ದಾರಿತನ ಎನ್ನಬೇಕಾಗಿದೆ. ಸಾರ್ವಜನಿಕ ಸೇವೆಗಿಂತ ಸ್ವಯಂ ಹಿತಾ ಸಕ್ತಿಯೇ ಮುಖ್ಯವೆಂಬಂತೆ ವರ್ತಿಸುತ್ತಿರುವ ಒಕ್ಕೂಟಗಳ ಈ ಧೋರಣೆ ಖಂಡನೀಯ. ಆರ್ಥಿಕತೆಯ ಬೆನ್ನೆಲುಬಾಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ತಬ್ಧಗೊಳಿಸಿ ಸಾರ್ವಜನಿಕರುಹಾಗೂ ಉದ್ಯಮಿಗಳನ್ನು ‘ಒತ್ತೆಯಾಳಾಗಿ’ ಇಟ್ಟುಕೊಳ್ಳುವುದು ಅತ್ಯಂತ ಕೆಟ್ಟ ಪ್ರವೃತ್ತಿ. ಸರ್ಕಾರ ಹಾಗೂ ಆಡಳಿತ ಮಂಡಳಿಗಳ ವಿನಂತಿಯನ್ನೂ ಲೆಕ್ಕಿಸದೆ ಸಾರ್ವಜನಿಕರ ಹಣಕಾಸಿನ ತುರ್ತು ಅಗತ್ಯಗಳನ್ನುನಿರ್ಲಕ್ಷಿಸುತ್ತಿರುವುದು ಒಳ್ಳೆಯದಲ್ಲ. ಬ್ಯಾಂಕ್ ನೌಕರರ ಒಕ್ಕೂಟಗಳು ತಮ್ಮ ಹಠಮಾರಿ ಧೋರಣೆಯನ್ನು ಕೈಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ.
– ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



