Mysore
26
few clouds

Social Media

ಶುಕ್ರವಾರ, 18 ಸೆಪ್ಟೆಂಬರ್ 2026
Light
Dark

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

dgp murder case

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ, ರಾತ್ರಿವೇಳೆ ದೀಪಾಲಂಕಾರಕ್ಕೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿರುವ ಮರಗಳಿಗೆ ಸಣ್ಣಸಣ್ಣಬಲ್ಬ್‌ಗಳಿರುವ ಸರಳುಗಳನ್ನು ಅಳವಡಿಸುವ ನೆಪದಲ್ಲಿ ಒಂದೊಂದು ಮರಗಳಿಗೆ ಸುಮಾರು ಮೂವತ್ತಕ್ಕೂ ಹೆಚ್ಚು ಮೊಳೆಗಳನ್ನು ಒಡೆಯುವುದರಿಂದ ಮರಗಳಿಗೂ ‘ಗಾಯ’ ಮಾಡಿದಂತಾಗುತ್ತದೆ.
ಜೊತೆಗೆ ಇದರಿಂದ ಮರಗಳಿಗೆ ರೋಗ ಮತ್ತು ಕೀಟಗಳ ಸೋಂಕು, ಪೋಷಕಾಂಶಗಳ ಸರಬರಾಜಿಗೆ ತೊಂದರೆ, ಆಂತರಿಕ ಕೊಳೆತ, ಬೆಳವಣಿಗೆ ಕುಂಠಿತ, ಕಿರಿಯ ಮರಗಳಿಗೆ ಮಾರಕಗಳಾಗುವ ಸಮಸ್ಯೆಗಳೇ ಹೆಚ್ಚಾಗಿವೆ.
ಆದ್ದರಿಂದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಮತ್ತು ೨೦೨೬ರ ಮೈಸೂರು ದಸರಾ ಮಹೋತ್ಸವಕ್ಕೆ ನೇಮಕಗೊಂಡಿರುವ ಅಽಕಾರಿಗಳು ಲೈಟಿಂಗ್ಸ್ ವೈಭವಕ್ಕೆ ಮೆರಗು ನೀಡಲು ಮೊಳೆಗಳನ್ನು ಒಡೆಯದೆ ಪರ್ಯಾಯ ವ್ಯವಸ್ಥೆಯ ಮೂಲಕ ಅಲಂಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

-ನಾಗೇಶ್ ಮಾನಸಗಂಗೋತ್ರಿ,
ಮೈಸೂರು

Tags:
error: Content is protected !!