Mysore
25
overcast clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ ಹೇಳುವ ಬಗೆ ಹೇಗೆ. ಇಂಥಹ ಸ್ಥಿತಿ ಕಾಣಿಸಿಕೊಂಡಿರುವದು ತಾಲ್ಲೂಕಿನ ಹುರ ಪಂಚಾಯಿತಿಯಲ್ಲಿ. ಇಲ್ಲಿನ ಅಭಿವೃದ್ದಿ ಅಧಿಕಾರಿಯೇ ಗ್ರಾಮಪಂಚಾಯಿತಿಯ ಆವರಣದಲ್ಲೆ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಾಗಾದರೆ ಸ್ವಚ್ಛತೆ ಎನ್ನುವದು ಇವರ ಪಾಲಿಗೆ ಬಾಯಲ್ಲಿ ಹೇಳಲು ಮಾತ್ರ ತಮಗೆ ಅದು ಅನುಸರಿಸಲು ಅಲ್ಲವಾ ಎಂದು ಗ್ರಾಮಸ್ಥರು ಬಹಿರಂಗವಾಗಿ ಆಡಿಕೊಳ್ಳುವಂತೆ ಈ ಮೂತ್ರ ವಿಸರ್ಜನೆಯ ಪ್ರಕರಣ ಬೆಳದಿದೆ. ಇಲ್ಲಿನ ಪಂಚಾಯಿತಿ ಆಭಿವೃದ್ದಿ ಅಧಿಕಾರಿ ಪಂಚಾಯಿತಿ ಆವರಣದೊಳಗೆ ನಿಂತು ಮೂತ್ರ ವಿಸರ್ಜಿಸುತ್ತಿರುವ ಚಿತ್ರ ಈಗ ಜಾಲ ತಾಣಗಳಲ್ಲಿ ಹರಿದಾಡುತ್ತಲೆ ತಾಲೂಕಿನ ಅಧಿಕಾರಿಗಳ ಪಾಲಿಗೆ ಇತ್ತ ನುಂಗಲೂ ಆಗದ ಉಗಳಲೂ ಆಗದ ತುತ್ತಾಗಿ ಪರಿಗಣಿಸಿದೆ.

ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಈ ಮಹಾಶಯರು ಹಾಡಾ ಹಗಲು ಅದೂ ಬಸ್ ನಿಲ್ದಾಣದ ಏದುರಿನಲ್ಲೇ ಜನರು ನೋಡುತ್ತಿರುವಾಗಲೇ ಗ್ರಾಮ ಪಂಚಾಯಿತಿ ಆವರಣದಲ್ಲೇ ಮೂತ್ರ ವಿಸರ್ಜಮಾಡಿದ್ದು ಎಲ್ಲರ ಅಪಹಾಸ್ಯದ ಟೀಕಿಗೆ ಗುರಿಯಾಗಿದೆ. ಮನೆ ಮನಗೆ ಶೌಚಾಲಯ ನಿರ್ಮಿಸಿ ಎನ್ನುವ ಸರ್ಕಾರದ ಸುತ್ತೋಲೆಗೆ ಪಂಚಾಯಿತಿ ಅಧಿಕಾರಿ ತಾನೇ ಬಹಿರಂಗವಾಗಿ ಅದೂ ಪಂಚಾಯಿತಿ ಆವರಣದಲ್ಲೇ ಮೂತ್ರ ವಿಸರ್ಜಿಸಿ ನೀಡುತ್ತಿರುವ ಗೌರವವೆ ಇದು ಕೇಳಿಸಿಕೊಳ್ಳುವಂತಾಗಿದೆ ಹುರಾ ಗ್ರಾಮ ಪಂಚಾಯಿತಿ ಅಧಿಕಾರಿಯ ಸ್ಥಿತಿ.

Tags:
error: Content is protected !!