Mysore
27
overcast clouds

Social Media

ಭಾನುವಾರ, 13 ಸೆಪ್ಟೆಂಬರ್ 2026
Light
Dark

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌
ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ. ಮನುಷ್ಯ ಹೆಜ್ಜೆ ಹೆಜ್ಜೆಗೂ ಹಸುರಿನ ಪರಿಸರ ಸಂರಕ್ಷಣೆ, ತಂಪು ವಾತಾವರಣ ನಿರ್ಮಾಣದ ಅಗತ್ಯತೆ ತುರ್ತಾಗಿದೆ. ಹಾಗಾಗಿ ಮಣ್ಣಿನ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಮಕ್ಕಳು, ಸಂಘ- ಸಂಸ್ಥೆಗಳು ಒತ್ತಾಸೆಯಾಗಿ ನಿಲ್ಲಬೇಕಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಿಒಪಿ ಗಣೇಶನ ಬೃಹತ್ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಒಂದೆಡೆಯಾದರೆ, ಇವುಗಳ ಬಳಕೆಯನ್ನು ತಡೆಯಲು ಪ್ರತಿಸ್ಪರ್ಧಿಯಾಗಿ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತ ಜಗೃತಿಗಳು ಮತ್ತೊಂಡೆ ಧ್ವನಿ ಎತ್ತಿವೆ.

ಅದರಲ್ಲಿ ಮುಖ್ಯವಾಗಿ ‘ಪರಿಸರ ಕ್ಕಾಗಿ ನಾವು’ ಎಂಬ ಸಂಘಟನೆ ಮುಂಚೂಣಿಯಲ್ಲಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರಕೃತಿಯ ಸಂರಕ್ಷಣೆ ಕುರಿತು ಸಂಘಟನೆಯವರು ಮಕ್ಕಳಲ್ಲಿ ಜಗೃತಿ ಮೂಡಿಸುತ್ತಿದ್ದಾರೆ.

ಬಹುತೇಕರು ಬಳಸುವ ಪಿಒಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಹೊಂದಿ ರುವ ಬೃಹತ್ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಆಗುವ ನಷ್ಟಗಳನ್ನು ಮಕ್ಕಳಲ್ಲಿ ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ.

ಪರಿಸರಕ್ಕಾಗಿ ನಾವು ಸಂಘಟನೆ ಯವರು ಕಳೆದ ಐದು ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಇವರು ನಂಜನಗೂಡು ಬಳಿಯ ಕೆರೆ ಯಿಂದ ಶುದ್ಧ ಜೇಡಿಮಣ್ಣನ್ನು ತಂದು, ಅದರಿಂದ ಗಣೇಶ ವಿಗ್ರಹ ಗಳನ್ನು ತಯಾರಿಸುವ ವಿಧಾನವನ್ನು ಮಕ್ಕಳಿಗೆ ಕಾರ್ಯಾಗಾರಗಳಲ್ಲಿ ಅನುಭವಿ ಶಿಲ್ಪಿಗಳಿಂದ ತರಬೇತಿ ನೀಡುತ್ತಿದ್ದಾರೆ. ಪ್ರತಿವರ್ಷ ಸುಮಾರು ೩೫೦ ರಿಂದ ೫೦೦ ಮಕ್ಕಳಿಗೆ ಜೇಡಿಮಣ್ಣನ್ನು ಹದವಾಗಿ ಮಾಡಿಕೊಳ್ಳುವುದರಿಂದ ಹಿಡಿದು, ಮಣ್ಣನ್ನು ಉಂಡೆಗಳನ್ನಾಗಿ ಮಾಡಿಕೊಂಡು ಅದಕ್ಕೆ ಗಣೇಶನ ರೂಪ ಕೊಡುವವರೆಗೂ ನಮ್ಮ ಪರಿಣತ ಶಿಲ್ಪಿಗಳು ಮಕ್ಕಳ ಜೊತೆಗಿರುತ್ತಾರೆ.

ಮೈಸೂರಿನ ವಿದ್ಯಾಜ್ಯೋತಿ ಶಾಲೆ, ತಿರುಮಲ ಶಾಲೆ, ಈಶ್ವರ ವಿದ್ಯಾಲಯ, ಆಲನಹಳ್ಳಿಯ ಸರ್ಕಾರಿ ಶಾಲೆ, ಜೆಎಸಎಸ್ ಶಾಲೆಗಳು, ಮಾತೃ ಮಂಡಳಿ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ೧೨ ವರ್ಷದ ಮಕ್ಕಳಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳವರೆಗೆ ಪರಿಸರ ಸ್ನೇಹಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಮಣ್ಣಿನ ಗಣಪತಿಯನ್ನು ಮಾಡುವುದನ್ನು ಹಂತ-ಹಂತವಾಗಿ ಹೇಳಿಕೊಡುವುದಕ್ಕೆ ‘ಪರಿಸರಕ್ಕಾಗಿ ನಾವು’ ಸಂಘಟನೆ ಶ್ರಮವಹಿಸಿದೆ.

ಗಣೇಶನಿಗೆ ಮಕ್ಕಳು ಕೊಡುವ ವಿಶೇಷ ರೂಪಗಳು
ಕೆಲ ಮಕ್ಕಳು ತಮ್ಮದೇ ಆದ ಯೋಚನೆಗೆ ತಕ್ಕಂತೆ ಗಣೇಶನಿಗೆ ವಿಶೇಷ ರೂಪ ಕೊಡುತ್ತಾರೆ. ಅದರಲ್ಲಿ ಕೆಲವರು ನಿಂತಿರುವ ಗಣೇಶ, ಸಿಂಹಾಸನದ ಮೇಲೆ ಕೂತಿರುವ ಗಣೇಶ, ರಾಜ ಗಾಂಭೀರ್ಯದ ಗಣಪ, ಲಡ್ಡು ತಿನ್ನುವ ಗಣಪ, ಬಾಲ ಗಣಪ. . . ಹೀಗೆ ನಾನಾ ಭಂಗಿಗಳನ್ನು ಹೊಂದಿರುವ ಪುಟ್ಟ ಪುಟ್ಟ ಗಣೇಶ ವಿಗ್ರಹಗಳನ್ನು ತಯಾರಿಸುತ್ತಾರೆ.

ಮಕ್ಕಳ ಮೂಲಕ ದೊಡ್ಡವರಿಗೂ ಜಾಗೃತಿ
ಕಾರ್ಯಾಗಾರಗಳಲ್ಲಿ ಮಕ್ಕಳು ತಯಾರಿಸಿರುವ ಗಣೇಶ ಮೂರ್ತಿ ಗಳನ್ನು ಅವರವರ ಮನೆಗೆ ತೆಗೆದು ಕೊಂಡು ಹೋಗಿ ಪೂಜಿಸಲು ಹೇಳುತ್ತೇವೆ. ಜೊತೆಗೆ ಅಕ್ಕಪಕ್ಕದ ಮನೆಯವ ರಿಗೂ ಮಣ್ಣಿನ ಗಣಪನ ಮಹತ್ವ ವನ್ನು ತಿಳಿಸಲು ಹೇಳುತ್ತೇವೆ. ಇದರಿಂದಾಗಿ ಬಹುತೇಕ ಮನೆ ಗಳಲ್ಲಿ ಮಣ್ಣಿನ ಗಣಪತಿಗಳನ್ನು ಇಟ್ಟು ಪೂಜಿಸಿರುವ ಸಾಕಷ್ಟು ಉದಾಹರಣೆಗಳು ಇವೆ ಎನ್ನುತ್ತಾರೆ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಅವರು.

Tags:
error: Content is protected !!