Mysore
25
overcast clouds

Social Media

ಶುಕ್ರವಾರ, 11 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ ನೀರಿನ ಲಭ್ಯತೆ, ರೈತರ ಸಮಸ್ಯೆ ಹಾಗೂ ಕುಡಿಯುವ ನೀರಿನ ಅವಶ್ಯಕತೆ ಬಗ್ಗೆಯೂ ಯೋಚಿಸಬೇಕಾಗುತ್ತದೆ. ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳ ಬಾರದೇ? ಈ ಆದೇಶ ಎಷ್ಟರ ಮಟ್ಟಿಗೆ ಸರಿ? ರಾಜ್ಯದಲ್ಲಿ ಕಂಡುಬರುತ್ತಿರುವ ಬರದ ಸಂದರ್ಭದಲ್ಲೇ ನೀರಿನ ಬಗ್ಗೆ ಎಂತಹ ಗಂಭೀರ ಪರಿಸ್ಥಿತಿ ಇದೆ. ಈ ಮಾಹಿತಿಯನ್ನು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಸಿಡಬ್ಲ್ಯುಆರ್‌ಸಿ ಎರಡೂ ರಾಜ್ಯಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ವಾಸ್ತವದ ಬಗ್ಗೆಯೂ ಅರಿವಿರಬೇಕು. ಸಿಡಬ್ಲ್ಯುಆರ್‌ಸಿಯ ತೀರ್ಮಾನ ಯಾವಾಗಲೂ ತಮಿಳುನಾಡು ಪರವಾಗಿಯೇ ಇರುತ್ತದೆ. ಈ ರೀತಿ ಆಗಬಾರದು.ಪ್ರತಿ ಸಲವೂ ಏಕಪಕ್ಷೀಯ ನಿರ್ಧಾರ ಆಗುತ್ತಿದ್ದರೆ ಅದರ ತೀರ್ಮಾನವನ್ನು ಪಕ್ಷೀಯ ತೀರ್ಮಾನವೆಂದು ಪರಿಗಣಿಸಬೇಕಾಗುತ್ತದೆ.

ನೀರಿನ ಲಭ್ಯತೆ ನೋಡಿಕೊಂಡು ಅಧ್ಯಯನ ಮಾಡಿ ನಿಷ್ಪಕ್ಷಪಾತವಾಗಿ ಸಿಡಬ್ಲ್ಯುಆರ್‌ಸಿ ಆದೇಶ ಮಾಡಬೇಕು.

-ಎ.ಎಸ್. ಗೋಪಾಲಕೃಷ್ಣ, ಮೈಸೂರು

Tags:
error: Content is protected !!