Mysore
25
overcast clouds

Social Media

ಗುರುವಾರ, 10 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ ಹೆಚ್ಚು ಕೃಷಿಕರು ಡಿಜಿಟಲ್ ಸಾಕ್ಷರತೆ ಇಲ್ಲದ ಸಣ್ಣ ರೈತರಾಗಿzರೆ. ಇಂಟರ್ನೆಟ್ ಸಮಸ್ಯೆ, ಜಿಪಿಎಸ್ ಲೊಕೇಶನ್ ದೋಷ ಮತ್ತು ಜಮೀನಿನ ಗಡಿ ಗುರುತಿಸುವಿಕೆಯ ಗೊಂದಲಗಳಿಂದಾಗಿ ಬೆಳೆ ಪರಿಹಾರ, ಬೆಂಬಲ ಬೆಲೆ ಹಾಗೂ ವಿಮೆ ಸೌಲಭ್ಯಗಳಿಂದ ಬಡ ರೈತರು ವಂಚಿತರಾಗುವ ಭೀತಿ ಎದುರಾಗಿದೆ.

ಸರ್ಕಾರವು ತಂತ್ರeನದ ನೆಪದಲ್ಲಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೆ, ಎಲ್ಲ ಜಿಗಳ ಕೃಷಿ ನಿರ್ದೇಶಕರು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಕಂದಾಯ, ಪಂಚಾಯತ್ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಯನ್ನು ನೇರವಾಗಿ ನಿಯೋಜಿಸಿ, ರೈತರ ಬಳಿಗೇ ತೆರಳಿ ಉಚಿತವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಅಽಕಾರಿಗಳು ಕೇವಲ ಆದೇಶ ಹೊರಡಿಸದೆ, ರೈತರಿಗೆ ನೆರವು ನೀಡಿ ಈ ಯೋಜನೆಯ ಪೂರ್ಣ ಲಾಭ ತಲುಪುವಂತೆ ಮಾಡುವುದು ತುರ್ತು ಅಗತ್ಯವಾಗಿದೆ.

– ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!