Mysore
26
broken clouds

Social Media

ಭಾನುವಾರ, 06 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: 3 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ಜನರಿಗೋ, ಖಾಸಗಿ ವಾಹನಗಳಿಗೋ?

ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್ ನಿಲ್ದಾಣವನ್ನು ಮುಖ್ಯ ರಸ್ತೆಯ ನಿರ್ಮಾಣ ಮಾಡಿರುವುದು ಅಚ್ಚರಿ ಮೂಡಿಸುತ್ತದೆ.

ಇದನ್ನು ನಿರ್ಮಾಣ ಮಾಡಿರುವವರ ಜ್ಞಾನಮಟ್ಟವು ಎಷ್ಟಿದೆ ಎಂದು ಯೋಚಿಸುವಂತಾಗಿದೆ. ಸಾರ್ವಜನಿಕರು ಬಿಸಿಲು, ಮಳೆ, ಗಾಳಿ ಎನ್ನದೆ ನಡುರಸ್ತೆಯ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಪ್ರತಿ ದಿನವೂ ಒಂದಿಂದು ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೆ.

ಗಮನಾರ್ಹ ಸಂಗತಿ ಎಂದರೆ, ಈ ಬಸ್ ನಿಲ್ದಾಣದಲ್ಲಿ, ಖಾಸಗಿ ವಾಹನಗಳನ್ನು ಹಗಲು- ರಾತ್ರಿ ಎನ್ನದೆ ಪಾರ್ಕಿಂಗ್ ಮಾಡಿರುತ್ತಾರೆ. ಈ ಬಸ್ ನಿಲ್ದಾಣ ನಿರ್ಮಾಣವಾಗಿರುವುದು ಪ್ರಯಾಣಿಕರಿಗೊ ಅಥವಾ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಮಾಡಲೊ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಯಾರು ಉತ್ತರಿಸುತ್ತಾರೆ?

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!