Mysore
30
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ: ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿತ

KRS Dam

ಮಂಡ್ಯ:  ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಒಳಹರಿವಿಗಿಂತ ಮೂರು ಪಟ್ಟು ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ತಗ್ಗಿದ ಪರಿಣಾಮ ಜಲಾಶಯಕ್ಕೆ ನೀರಿನ ಒಳಹರಿವು ತೀವ್ರವಾಗಿ ಕುಂಠಿತಗೊಂಡಿದೆ.

ಪ್ರಸ್ತುತ ಕೆಆರ್‌ಎಸ್‌ಗೆ ಕೇವಲ 3,028 ಕ್ಯೂಸೆಕ್‌ ನೀರು ಒಳಹರಿವಾಗುತ್ತಿದ್ದು, ಹೊರಹರಿವಿನ ಪ್ರಮಾಣ ಬರೋಬ್ಬರಿ 9,253 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ 7,697 ಕ್ಯೂಸೆಕ್‌ ಇದ್ದ ಹೊರಹರಿವು ನಿನ್ನೆ 8,544 ಕ್ಯೂಸೆಕ್‌ಗೆ ಹೆಚ್ಚಳವಾಗಿತ್ತು.

ಒಳಹರಿವಿಗಿಂತ ಮೂರು ಪಟ್ಟು ಅಧಿಕ ನೀರನ್ನು ಹೊರಬಿಡುತ್ತಿರುವ ಪರಿಣಾಮ, ಇತ್ತೀಚೆಗಷ್ಟೇ 111 ಅಡಿಗೆ ತಲುಪಿದ್ದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಇದೀಗ 108.76 ಅಡಿಗೆ ಕುಸಿದಿದೆ.

Tags:
error: Content is protected !!