Mysore
24
broken clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ ಒಳಪಡುವ ವಾರ್ಡ್ ಸಂಖ್ಯೆ 42ರ ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿದರು. ವಲಯ ಆಯುಕ್ತರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್ ವೈಸರ್, ಪೌರಕಾರ್ಮಿಕರು, ಮತ್ತು ಸ್ಥಳೀಯ ಸಾರ್ವಜನಿಕರು ಪಾಲ್ಗೊಂಡು ಸ್ವಚ್ಛಗೊಳಿಸುವ ಮೂಲಕ ಅಂದಾಜು 10 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ವಲಯ 9ರ ವ್ಯಾಪ್ತಿಗೆ ಒಳಪಡುವ ವಾರ್ಡ್ ಸಂಖ್ಯೆ 35ರ ರಿಂಗ್ ರಸ್ತೆಯ ಸರ್ವೀಸ್ ರಸ್ತೆ ಪಕ್ಕದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನಗರಪಾಲಿಕೆ ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಚಾಲನೆ ನೀಡಿದರು. ವಲಯ ಆಯುಕ್ತ ಧನುಷ್, ಪರಿಸರ ಅಭಿಯಂತರರಾದ ಲೋಕೇಶ್ವರಿ, ಆರೋಗ್ಯ ನಿರೀಕ್ಷಕ ಪ್ರಭಾಕರ್, ಸಹನ, ಸ್ಯಾನಿಟರಿ ಸೂಪರ್‌ವೈಸರ್, ಪೌರಕಾರ್ಮಿಕರು ಪಾಲ್ಗೊಂಡು ಸ್ವಚ್ಛಗೊಳಿಸುವ ಮೂಲಕ 5 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

 

 

Tags:
error: Content is protected !!