Mysore
26
broken clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಓದುಗರ ಪತ್ರ

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ ಕಾರು ಮಾಲೀಕರು ಹೇಳದೇ-ಕೇಳದೇ ಮನೆಗಳ ಗೇಟಿನ ಮುಂದೆ ಕಾರುಗಳನ್ನು ನಿಲ್ಲಿಸುವುದರಿಂದ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಒಂದು ರೀತಿಯ ದರ್ಪವನ್ನೇ ತೋರಿಸುತ್ತಾರೆ.

ಎರಡು ದಿನಗಳ ಹಿಂದೆ ಕಾರೊಂದನ್ನು ಗೇಟಿನ ಮುಂದೆ ನಿಲ್ಲಿಸಲಾಗಿತ್ತು. ಕಾರಣ ಕೇಳಿದರೆ ಇದು ಸರ್ಕಾರಿ ಜಗ, ಎಲ್ಲಿ ಬೇಕಾದ್ರೂ ನಿಲ್ಲಿಸುತ್ತೇವೆ, ಕೇಳುವುದಕ್ಕೆ ನೀವ್ಯಾರು ಎಂದು ಜಗಳಕ್ಕಿಳಿದರು. ಇದು ಸಣ್ಣ ವಿಷಯವಾದರೂ ಎಷ್ಟೋ ಸಂದರ್ಭದಲ್ಲಿ ಸಣ್ಣದೇ ಪ್ರಮಾದವಾಗಿರುವ ಉದಾಹರಣೆಗಳನ್ನು ನೋಡಿದ್ದೇವೆ. ಸಂಚಾರ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ.

– ಎ.ಆರ್. ಸತ್ಯನಾರಾಯಣಮೂರ್ತಿ, ಮೈಸೂರು

Tags:
error: Content is protected !!