Mysore
23
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕೃತ ಮುದ್ರೆಗಾಗಿ ಪಟ್ಟಿಯನ್ನು ಲೋಕ ಭವನಕ್ಕೆ ಕಳುಹಿಸಿದ್ದರು. ಇದಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಅಂಗೀಕಾರ ನೀಡಿದ್ದಾರೆ. ಇದರೊಂದಿಗೆ ಕಳೆದ ಹಲವಾರು ದಿನಗಳಿಂದ ಇಂದು – ನಾಳೆ ಎನ್ನುತ್ತಾ ಕಾಲ ತಳ್ಳುತ್ತಿದ್ದ ಖಾತೆ ಹಂಚಿಕೆ ಚರ್ಚೆಗೆ ತೆರೆ ಬಿದ್ದಿದೆ.

ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆ ಬೇಕೆಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ.

ಮುನಿಯಪ್ಪ ಅವರು ಹೊಂದಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ರಿಜ್ವಾನ್ ಅರ್ಷದ್ ಅವರಿಗೆ ನೀಡಲಾಗಿದೆ. ಜಮೀರ್ ಅಹಮದ್‌ಗೆ ಈ ಹಿಂದೆ ಹೊಂದಿದ್ದ ವಸತಿ ಖಾತೆಯನ್ನೇ ಹಂಚಿಕೆ ಮಾಡಲಾಗಿದ್ದು, ಅವರ ಬಳಿ ಇದ್ದ ವಕ್ಛ್ ಖಾತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರಿಗೆ ನೀಡಲಾಗಿದೆ. ಎನ್.ಚಲುವರಾಯಸ್ವಾಮಿಗೆ ಜಲ ಸಂಪನ್ಮೂಲ ಖಾತೆಯನ್ನು ವಹಿಸಲಾಗಿದೆ. ಈ ಖಾತೆ ಹಿಂದೆ ರಾಮಲಿಂಗಾ ರೆಡ್ಡಿ ಅವರ ಬಳಿ ಇತ್ತು. ರಾಮಲಿಂಗಾ ರೆಡ್ಡಿ ಅವರಿಗೆ ಅರಣ್ಯ ಮತ್ತು ಪರಿಸರ ಖಾತೆಯನ್ನು, ಪಿ.ಎಂ.ನರೇಂದ್ರಸ್ವಾಮಿಗೆ ಕೃಷಿ ಖಾತೆಯನ್ನು ನೀಡಲಾಗಿದೆ. ಕೆ.ಎನ್.ಶಿವಲಿಂಗೇಗೌಡರಿಗೆ ಅಬಕಾರಿ ಖಾತೆಯನ್ನು, ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆಯನ್ನು ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಕೆ.ಎಚ್.ಮುನಿಯಪ್ಪ – ಸಮಾಜ ಕಲ್ಯಾಣ
ಯು.ಟಿ.ಖಾದರ್ – ಆರೋಗ್ಯ ಮತ್ತು ವಕ್ಛ್
ಚಲುವರಾಯಸ್ವಾಮಿ – ಜಲ ಸಂಪನ್ಮೂಲ
ಪಿ.ಎಂ.ನರೇಂದ್ರಸ್ವಾಮಿ – ಕೃಷಿ
ಸಿ.ಪುಟ್ಟರಂಗಶೆಟ್ಟಿ – ಪಶು ಸಂಗೋಪನೆ ಮತ್ತು ರೇಷ್ಮೆ
ಜಮೀರ್ ಅಹಮದ್  – ವಸತಿ
ರಾಮಲಿಂಗಾರೆಡ್ಡಿ – ಅರಣ್ಯ ಮತ್ತು ಪರಿಸರ
ರಿಜ್ವಾನ್ ಅರ್ಷದ್ – ಆಹಾರ ಮತ್ತು ನಾಗರಿಕ ಪೂರೈಕೆ
ಸಂತೋಷ್  – ಲಾಡ್ ಕಾರ್ಮಿಕ
ಕೆ.ಎಸ್.ಬಸಂತಪ್ಪ – ಮುಜರಾಯಿ, ಮೀನುಗಾರಿಕೆ
ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
ಬಸವರಾಜ ರಾಯರಡ್ಡಿ – ಉನ್ನತ ಶಿಕ್ಷಣ
ಲಕ್ಷ್ಮಣ ಸವದಿ – ಸಹಕಾರ ಇಲಾಖೆ
ಎಸ್.ಎಸ್.ಮಲ್ಲಿಕಾರ್ಜುನ – ಗಣಿ ಮತ್ತು ತೋಟಗಾರಿಕೆ
ಎಚ್.ಸಿ.ಬಾಲಕೃಷ್ಣ – ಪೌರಾಡಳಿತ
ಅಜಯ್ ಸಿಂಗ್ – ಸಣ್ಣ ನೀರಾವರಿ, ಐಟಿ, ಬಿಟಿ
ಟಿ.ರಘುಮೂರ್ತಿ – ಪರಿಶಿಷ್ಟ ಪಂಗಡಗಳ ಕಲ್ಯಾಣ
ರುದ್ರಪ್ಪ ಲಮಾಣಿ – ಸಕ್ಕರೆ ಮತ್ತು ಜವಳಿ
ಶಿವರಾಜ್ ತಂಗಡಗಿ – ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ
ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ
ಬಿ.ನಾಗೇಂದ್ರ – ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಕೆ.ಎನ್.ಶಿವಲಿಂಗೇಗೌಡ – ಅಬಕಾರಿ

 

Tags:
error: Content is protected !!