Mysore
21
overcast clouds

Social Media

ಬುಧವಾರ, 22 ಜುಲೈ 2026
Light
Dark

ಓದುಗರ ಪತ್ರ: ರೈಲಿನಲ್ಲಿ ತಿನಿಸು ಮಾರುವವರು ವೈಯಕ್ತಿಕ ಸ್ವಚ್ಛತೆಗೂ ಗಮನ ನೀಡಲಿ

dgp murder case

ರೈಲ್ವೆ ಇಲಾಖೆಯಿಂದ ಅನುಮತಿ ಪಡೆದ ಮಾರಾಟಗಾರರು ಪ್ರತಿನಿತ್ಯ ರೈಲುಗಳಲ್ಲಿ ಕಾಫಿ, ಟೀ, ಇಡ್ಲಿ, ರೈಸ್ ಬಾತ್ ಮೊದಲಾದ ಆಹಾರ ಪದಾರ್ಥಗಳು, ನೀರು ಹಾಗೂ ಲೇಸ್, ಕುರ್‌ಕುರೆ ಮೊದಲಾದ ತಿಂಡಿಯ ಪೊಟ್ಟಣಗಳನ್ನು ಮಾರಾಟ ಮಾಡುತ್ತಾರೆ. ಆದರೆ ಅವರು ಹಾಕಿಕೊಂಡಿರುವ ಬಟ್ಟೆಗಳು ಕೊಳಕಾಗಿರುತ್ತವೆ ಹಾಗೂ ಎಷ್ಟೋ ಮಾರಾಟಗಾರರು ಮುಖ ಕ್ಷೌರ ಮಾಡದೇ, ತಲೆ ಕೂದಲು ಕತ್ತರಿಸಿರುವುದಿಲ್ಲ. ಪ್ರಯಾಣಿಕರಿಗೆ ಇದು ಮುಜುಗರ ತರಿಸುತ್ತದೆ.

ರೈಲಿನಲ್ಲಿ ಊಟ, ತಿಂಡಿ ಹಾಗೂ ಪಾನೀಯಗಳನ್ನು ಮಾರಾಟ ಮಾಡುವವರು ಶುಭ್ರವಾದ ಬಟ್ಟೆ ಧರಿಸಬೇಕು ಹಾಗೂ ನಿಯಮಿತವಾಗಿ ಕಟಿಂಗ್, ಶೇವಿಂಗ್ ಮಾಡಿಕೊಂಡಿರಬೇಕು ಎಂಬ ನಿಯಮವನ್ನು ರೈಲ್ವೆ ಇಲಾಖೆ ಅಧಿಕಾರಿಗಳು ರೂಪಿಸಬೇಕು. ಇದರಿಂದ ಮಾರಾಟ ಮಾಡುವವರೂ ಶಿಸ್ತು ಪಾಲಿಸಿದಂತಾಗುತ್ತದೆ. ಪ್ರಯಾಣಿಕರಿಗೂ ಅವರಿಂದ ಮುಜುಗರವಾಗುವುದಿಲ್ಲ.

-ಅನಿರುದ್ಧ , ಮೈಸೂರು

Tags:
error: Content is protected !!