Mysore
29
overcast clouds

Social Media

ಶನಿವಾರ, 11 ಜುಲೈ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ : ದೇಶವನ್ನು ಒಂದುಗೂಡಿಸಿದ ಖಾದಿ ಮಂತ್ರ

ಡಾ.ಪ್ರಮೀಳಾದೇವಿ ಬಿ.ಕೆ

ಖಾದಿಯಿಂದ ದೇಶವನ್ನು ಒಂದು ಗೂಡಿಸುವುದು ಸಾಧ್ಯವೇ? ಇಂದು ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆ. ಸ್ವಾತಂತ್ರ್ಯ ಬಂದು ಏಳು ದಶಕ ಗಳ ನಂತರ ಈ ಪ್ರಶ್ನೆ ಸಹಜ. ಅಂದು ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಭಾರತದ ಆರ್ಥಿಕ ಸಿತ್ಥಿಯನ್ನು ಸುಧಾರಿಸಲು ಮತ್ತು ಸ್ತ್ರೀ ಪರುಷರೆನ್ನದೆ ಎಲ್ಲರಲ್ಲೂ ದೇಶಾಭಿಮಾನವನ್ನು ತುಂಬಲು ಮಾತ್ರವಲ್ಲದೆ ಬ್ರಿಟಿಷರನ್ನು ಹೊಡೆದೋಡಿಸಲು ಗಾಂಧೀಜಿ ಯವರು ಆಯ್ದುಕ್ಕೊಂಡ ಸೂತ್ರ. ಸರಳ ದಿನನಿತ್ಯದ ಬಳಕೆ ಗಾಗಿದ್ದ ಉಪ್ಪು ಮತ್ತು ಖಾದಿ ಮೂಲಕ ಅವರು ಬ್ರಿಟಿಷ್ ಸಾಮ್ರಾಜ್ಯದ ಅಗುಳಿಗಳನ್ನು ಸಡಿಲಗೊಳಿಸಿದರೆಂದರೆ ತಪ್ಪಲ್ಲ. ಇಂದು ಈ ಪ್ರಯೋಗಗಳ ನೆನಪು ನಮಗೆ ಆಶ್ಚರ್ಯವೆನಿಸಿದರೂ ಅಂದು ಅವು ಜನರಿಗೆ ಸಮೀಪವಿದ್ದ ಸುಲಭವಾಗಿ ಅರ್ಥವಾಗುವ ವಸ್ತುಗಳಾಗಿ ಸ್ವಾತಂತ್ರ್ಯ ಸಾಧನೆಯ ಗುರಿಗಳಾಗಿದ್ದವು

ಮೋಹನದಾಸ್ ಕರಮಚಂದ ಗಾಂಧೀ, ವಿಶ್ವವು ಗುರುತಿ ಸುವಂತೆ ಮಹಾತ್ಮ ಗಾಂಽಜಿಯವರ ಬದುಕ್ಕೊಂದು ತೆರೆದ ಪುಸ್ತಕ. ಆದರೂ ಅವರ ಬದುಕನ್ನು, ಸಾಧನೆಯನ್ನು ವರ್ಣಿಸುವುದೆಂದರೆ ಕುರುಡರು ಆನೆಯನ್ನು ವರ್ಣಿಸಿ ದಂತೆಯೇ. ಏಕೆಂದರೆ ಜನರಿಗೆ ಮಹಾತ್ಮರು ಅರ್ಥವಾದದು, ಕಂಡದ್ದು ಹಾಗೆಯೇ, ಅವರ ಬದುಕಿನ ಅರ್ಥ, ಗುರಿ ಉದ್ದೇಶ ಒಂದೇ: ಸರ್ವೇಜನ ಸುಖೀಃನೊಭವತು. ಅವರು ಹಲವರಿಗೆ ಮಾರ್ಗದರ್ಶನ ತೋರುವ ನಾಯಕನಂತೆ, ಗುರುವಿನಂತೆ, ಪ್ರೀತಿಪಾತ್ರನಾದ ತಂದೆಯಂತೆ, ಮಕ್ಕಳಿಗೆ ಅಚ್ಚುಮೆಚ್ಚಿನ ತಾತನಂತೆ. . . ಹೀಗೆ ಅವರನ್ನು ವರ್ಣೀಸು ವುದೆಂತು!

ಮಹಾತ್ಮರ ಸತ್ಯಾಗ್ರಹಗಳು ಪ್ರಚಾರಗಳು, ಆಂದೋಲನ ಗಳು, ಉಪವಾಸಗಳು ಮಾತ್ರವಲ್ಲದೆ ಅವರು ಖಾದಿಯ ಉತ್ಪಾದನೆ, ಬಳಕೆಗೆ ಕರೆ ನೀಡುವುದರೊಂದಿಗೆ ಅದನ್ನು ದೇಶ ಕಟ್ಟುವ ಸಂಕೇತವಾಗಿ ಮಾತ್ರವಲ್ಲದೆ ಅವರು ಅನು ಸರಿಸಿದ ದೃಢ ನಿಲುವು ವಸ್ತ್ರೋದ್ಯಮದ ಪುನಶ್ಚೇತನಕ್ಕೆ ಪರಿಹಾರ ಸೂತ್ರವಾಗಿತ್ತು.

ವ್ಯಾಪಾರಿ ಉದ್ದೇಶದಿಂದ ಭಾರತವನ್ನಾಕ್ರಮಿಸಿ ಕೊಂಡಿದ್ದ ಬ್ರಿಟಿಷರು ಗಾಂಽಜಿಯರ ಸ್ವದೇಶಿ ಬಳಕೆ, ಖಾದಿಯ ಮೂಲಕ ಗೃಹಕೈಗಾರಿಕೆಗಳ ಹೆಚ್ಚುವಿಕೆ, ವಿದೇಶಿ ವಸ್ತುಗಳ ಬಹಿಷ್ಕಾರಗಳಿಂದ ಸೋತು ವ್ಯಾಪಾರದಲ್ಲಿನ ನಷ್ಟದಿಂದಾಗಿಯೇ ಭಾರತವನ್ನು ಬಿಟ್ಟುಹೋದರಂಬುದು ಖಚಿತ. ಸ್ವದೇಶಿ ಬಳಕೆ, ಗಾಂಧೀಜಿಯವರ ಸತ್ಯಾಗ್ರಹಗಳು, ಚಳವಳಿಗಳು ಬ್ರಿಟಿಷರ ಆಳ್ವಿಕೆಗೆ ಭಾರತೀಯರ ಒಪ್ಪಿಗೆಯಿಲ್ಲವೆಂಬುದನ್ನು ಹಾಗೂ ದೇಶವ್ಯಾಪಿಂಯಾಗಿದ್ದ ಅಸಹಕಾರ ಚಳವಳಿ, ಕಾಯ್ದೆಭಂಗ ಚಳವಳಿಗಳು ಉಂಟು ಮಾಡಿದ ಸ್ಥಿತಿಯಲ್ಲದೆ ‘ಭಾರತ ಬಿಟ್ಟು ತೊಲಗಿರಿ’ ಎಂದ ಅಂತಿಮ ಕರೆ ದೇಶದ ಜನರೆಲ್ಲ ಸ್ವಾತಂತ್ರ್ಯಕ್ಕಾಗಿ ಕ್ಷಣಗಣನೆ ಮಾಡಲಾರಂಭಿಸಿದ್ದು ಬ್ರಿಟಿಷರು ಭಾರತವನ್ನು ಬಿಡಲೇಬೇಕಾದುದು ಸುಳ್ಳಲ್ಲ. ಅದರೂ ಗಾಂಧೀಜಿಯವರೇಕೆ ಖಾದಿಯನ್ನು ಪ್ರತಿ ಭಟನೆಯ ವಸ್ತುವಾಗಿಸಿಕ್ಕೊಂಡರೆಂದರೆ ಇಲ್ಲೊಂದು ಮಹತ್ತರ ಅರ್ಥಶಾಸ್ತ್ರದ ಲೆಕ್ಕಾಚಾರವಿದೆ. ಭಾರತದ ದುಸ್ಥಿತಿ ಯಲ್ಲಿದ್ದ ಆರ್ಥಿಕಕ್ಷೇತ್ರದ ಪುನಃಶ್ಚೇತನಕ್ಕೆಂದು ಹಾಕಿಕೊಂಡ ಖಾದಿಯ ನೂಲುವಿಕೆ, ಸರ್ವವ್ಯಾಪಿಯಾದ ಪ್ರಚಾರ ಖಾದಿಯ ಬಳಕೆ ದೇಶದ ಅಂದಿನ ಕಠಿನ ಸಮಸ್ಯೆಯಾದ ಗುಡಿಕೈಗಾರಿಕೆಗಳ ಮುಚ್ಚುವಿಕೆಯಿಂದ ಗ್ರಾಮಗಳ ಜನರನ್ನು ಹೆಚ್ಚಾಗಿ ಕಾಡಿದ್ದು ನಿರುದ್ಯೋಗ, ಬಡತನ ಮತ್ತು ಬರಗಾಲಗಳ ಪರಿಹಾರಕ್ಕಾಗಿ ಅವರು ಖಾದಿಯನ್ನು ಪ್ರತಿಭಟನೆಯಾಗಿ ಮತ್ತು ಪುನಶ್ಚೇತನದ ಕಾರ್ಯವಾಗಿ ಆದುಕೊಂಡರು.

ದೇಶದ ಸಂಸ್ಕೃತಿಯ ಆರಂಭದಿಂದಲೂ ವಿದೇಶಗಳಲ್ಲಿ ಮನೆಮಾತಾಗಿದ್ದ ಭಾರತದ ಹತ್ತಿ ಉದ್ಯಮ, ಕಾಲಕಾಲಕ್ಕೆ ಆಗುತ್ತಿದ್ದ ಪ್ರಯೋಗಗಳು ವಿನ್ಯಾಸ, ಬಣ್ಣಗಳ ಅನುಷ್ಠಾನಕ್ಕೆ ಆಸ್ಪದ ನೀಡಿದ ರಾಜರು, ಸುಲ್ತಾನರು, ಬಾದಶಹರಿಂದಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ವಸ್ತ್ರ ಪ್ರಮುಖ ಆಕರ್ಷಣೆಯಾಗಿದ್ದು ಇಲ್ಲಿನ ಸಿಲ್ಕ್, ಹತ್ತಿ ವಸ್ತ್ರಗಳಿಗೆ ಯೂರೋಪಿನಲ್ಲಿ ಸದಾ ಬೇಡಿಕೆ ಇತ್ತು. ಯೂರೋಪಿನ ರಾಜರುಗಳ, ನೋಬಲ್‌ರ ಆಸ್ಥಾನದಲ್ಲಿಯೂ ಸಮಾರಂಭ ಗಳಲ್ಲಿಯೂ ಬಳಕೆಯಾಗುತ್ತಿದ್ದವು. ಗುಡಿ ಕೈಗಾರಿಕೆಗಳು ಜನರ ಉದ್ಯೋಗ ಮಾತ್ರವಲ್ಲದೆ, ಆರ್ಥಿಕ ಸಮೃದ್ಧಿಗೂ ಕಾರಣವಾಗಿ ಸಂಪತ್ತು ಹರಿದುಬರಲಾರಂಭಿಸಿತು. ಈ ವಿದೇಶಿ ಬೇಡಿಕೆಯೇ ಅದರಿಂದಾದ ಹೆಚ್ಚಿನ ಲಾಭವೆ ಯೂರೋಪಿಯನ್ನರು ತಮ್ಮ ವ್ಯಾಪಾರಿ ಕಂಪೆನಿಗಳನ್ನು ತೆರೆದು ಭಾರತಕ್ಕೆ ಬರುವಂತೆ ಮಾಡಿದ್ದು.

ಕಾಶ್ಮೀರದಿಂದ ಹಿಡಿದು ಕೇರಳದವರೆಗೆ, ಪಂಜಾಬಿನಿಂದ ಅರುಣಾಚಲ ಪ್ರದೇಶದ ವರೆಗೆ ವಿವಿಧ ವಿನ್ಯಾಸ, ಗುಣಮಟ್ಟಗಳ ಶ್ರೇಷ್ಠತೆಗೆ ಹೆಸರಾದ ವಸ್ತ್ರಗಳು ಲೋಕ ಪ್ರಸಿದ್ಧವಾಗಿದ್ದವು. ಬಂಗಾಳ ವಿಶ್ವಪ್ರಸಿದ್ಧಿ ಪಡೆದದ್ದು ಅಲ್ಲಿನ ನವಿರಾದ ಬಟ್ಟೆಗೆ, ಮಸ್ಲಿನ್ ವಸ್ತ್ರಗಳಿಂದ. ಕಾಶ್ಮೀರದ ನವಿರಾದ ಬಣ್ಣಬಣ್ಣದ ಕಸೂತಿಮಾಡಿದ ಉಡುಪುಗಳು, ದಕ್ಷಿಣದ ಹತ್ತಿವಸ್ತ್ರವಂತೂ ಪಾಶ್ಚಿಮಾತ್ಯ ಜಗತ್ತಿಗೆ ಮೊಟ್ಟಮೊದಲು ಪರಿಚಿತವಾಗಿತ್ತು. ಕ್ಯಾಲಿಕಟ್ ಹಾಗೂ ಸಮೀಪದ ಹಡಗುಕಟ್ಟೆಗಳಿಂದ ಹೆಚ್ಚಾಗಿ ರಪ್ತಾಗುತ್ತಿದ್ದುದು ಹತ್ತಿ ವಸ್ತ್ರ. ಹತ್ತಿಯ ಲಾಂಗ್‌ಕ್ಲಾತ್ ಯೂರೋಪಿನಲ್ಲಿ ಕ್ಯಾಲಿಕೋ ಎಂದು ಹೆಸರು ಪಡೆದಿತ್ತು.

ಈ ನೇಕಾರರು ತಮಗಾಗಿ, ತಮ್ಮ ನೆರೆಹೊರೆಯ ಗ್ರಾಮ ಗಳವರಿಗಾಗಿ ಬೇಕಾದುದನ್ನು ಉತ್ಪಾದಿಸುತ್ತಾ ಹೆಚ್ಚಿನದನ್ನು ದೂರದ ಮಾರುಕಟ್ಟೆಗಳಿಗೆ ಮಾರುತ್ತಿದ್ದ ನೆಮ್ಮದಿಯ ಕಾಲವಿತ್ತು. ಇದು ಉತ್ಪಾದನೆಯ ಎಲ್ಲ ಕ್ಷೇತ್ರಗಳಿಗೂ ಅನ್ವ ಯಿಸುತ್ತದೆ. ಅದರಲ್ಲೂ ನೇಕಾರ ಸಮುದಾಯದವರು ತನ್ನ ಹಾಗೂ ಸುತ್ತಲ ಗ್ರಾಮಗಳ ಜನತೆಗೆ ವಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದರು. ದೇಶವು ವಿವಿಧ ಭಾಗಗಳಲ್ಲಿ, ವಿವಿಧ ರೀತಿಯ ಉಪಯೋಗಕ್ಕೆಂದು, ವಿವಿಧ ಗುಣಮಟ್ಟದ, ವಿನ್ಯಾಸದ ವಸ್ತ್ರಗಳನ್ನು ಉತ್ಪಾದಿಸುತ್ತಾ ಸಾವಿರಾರು ವರ್ಷಗಳ ಕಾಲ ತನ್ನಲ್ಲಿ ಹೆಚ್ಚಾದುದನ್ನು ಹೊರಭಾಗ ಗಳಿಗೆ ಕಳುಹಿಸುವ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಭಾರತವು ಉತ್ಕೃಷ್ಟ ವಸ್ತ್ರಗಳನ್ನು ಉತ್ಪಾದಿಸುತ್ತಿದ್ದಲ್ಲದೆ, ಹಲವಾರು ದೇಶಗಳಿಗೆ ವಸ್ತ್ರದ ನೇಯ್ಗೆ ಯನ್ನು ಪರಿಚಯಿಸಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಶತಮಾನಗಳ ಕಾಲ ರಪ್ತಾಗುತ್ತಿದ್ದು ಹೆಚ್ಚಿನದಾಗಿ ಇಲ್ಲಿನ ಹತ್ತಿವಸ್ತ್ರ ಗಳು. ‘ಭಾರತವು ವಿಶ್ವಕ್ಕೆ ಹತ್ತಿ ವಸ್ತ್ರವನ್ನು ಹೊದಿಸಿದ ತಾಯಿ’, ‘ಮದರ್ ಆಫ್ ಕಾಟನ್’ ಎಂಬ ಕಾರ್ಲ್‌ಮಾರ್ಕ್ಸ್‌ನ ಹೇಳಿಕೆ ಉತ್ಪ್ರೆಕ್ಷೆಯಲ್ಲ,

ಭಾರತ ಬ್ರಿಟಿಷರ ವಶವಾಗಿ ಅವರು ಇಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಹತ್ತಿ ಯನ್ನು ಇಂಗ್ಲೆಂಡಿನಲ್ಲಿ ಆಗ ತಾನೇ ಆರಂಭಗೊಂಡಿದ್ದ ಕೈಗಾರಿಕೆಗಳಿಗೆ ಕಚ್ಚಾ ರೂಪದಲ್ಲಿ ರಫ್ತು ಮಾಡಿಕೊಂಡು ಜಾಣತನದಿಂದ ಇಲ್ಲಿನ ಗ್ರಾಮಗಳಲ್ಲಿ, ನಗರ ಪಟ್ಟಣಗಳಲ್ಲಿದ್ದ ನೇಯ್ಗೆ ಕೇಂದ್ರಗಳನ್ನು, ಗುಡಿಕೈಗಾರಿಕೆಗಳನ್ನು ಉದ್ಯಮ ಗಳನ್ನು ಮುಚ್ಚಿಸಿದಲ್ಲದೆ ಆ ವಸ್ತ್ರಗಳನ್ನು ಭಾರತೀಯರಿಗೆ ಮಾರಲಾರಂಭಿಸಿದ್ದು, ಇಲ್ಲಿನ ನೇಯ್ಗೆಗಾರರಲ್ಲಿ ನಿರು ದ್ಯೋಗ ಮತ್ತು ಬಡತನ ಹೆಚ್ಚಾಗಿ ಪದೇಪದೇ ಉಂಟಾದ ಬರಗಾಲಗಳಲ್ಲಿ ಮೃತಪಟ್ಟವರು ಹೆಚ್ಚಿನವರು ನಿರುದ್ಯೋಗಿ ಗಳಾಗಿದ್ದ ನೇಕಾರರೇ, ಅದರಲ್ಲೂ ಈ ಬರಗಾಲಗಳಲ್ಲಿ ಬಂಗಾಳದ ಪ್ರತಿಷ್ಠಿತ ಮಸ್ಲಿನ ತಯಾರಿಕೆಯ ನೇಕಾರ ವರ್ಗವೆ ಕಣ್ಮರೆಯಾದದು ದುರಂತ. ಇಂದು ಲಂಡನ್‌ನ ಮ್ಯೂಸಿಯಂನಲ್ಲಿರುವ ಮಸ್ಲಿನ್‌ವಸ್ತ್ರವೊಂದು ಈ ದುರಂತಕ್ಕೆ ಸಾಕ್ಷಿಯಂತಿದೆ ಇತ್ತೀಚೆಗೆ ಮಸ್ಲಿನ್‌ವಸ್ತ್ರದ ತಯಾರಿಕೆಯನ್ನು ಪುನರಾರಂಭಿಸಲು ಪ್ರಯತ್ನ ನಡೆಯುತ್ತಿದೆ.

ಈ ಕಠಿನ ಸಮಸ್ಯೆಗಳ ಅರಿವಿದ್ದ ಮಹಾತ್ಮರು ಹತ್ತಿ ಉದ್ಯಮದ, ಪುನಶ್ಚೇತನಕ್ಕಾಗಿ ಬಳಸಿದ ಸೂತ್ರ ಖಾದಿಯ ಉತ್ಪಾದನೆ ಮತ್ತು ಬಳಕೆಗೆಂದು ತಮ್ಮ ಬಹಳಷ್ಟು ಸಮಯ, ಶ್ರಮವನ್ನು ಮೀಸಲಿರಿಸಿದರು.

ಗಾಂಧೀಜಿಯವರು ಪ್ರತಿಪಾದಿಸಿದ್ದು ಸ್ವದೇಶಿ ಮತ್ತು ಖಾದಿಯ ಬಳಕೆ. ಅವರು ಹಠಹಿಡಿದು ತಮ್ಮ ಹಿಂಬಾಲ ಕರೆಲ್ಲ ಖಾದಿಯನ್ನು ನೂತು, ತಾವು ನೂತದ್ದನ್ನು ಧರಿಸುವಂತೆ ಮಾಡಿದ್ದು ಸಾಮಾನ್ಯವಲ್ಲ. ಖಾದಿ ತಯಾರಿಕೆ, ಪ್ರಚಾರ, ಮಾರಾಟ ಸರ್ವವ್ಯಾಪಿಯಾಯಿತು. ಖಾದಿ ತೊಡುವುದು ದೇಶಾಭಿಮಾನದ ಸಂಕೇತವಲ್ಲದೆ, ಸ್ವಾಭಿಮಾನದ ಸಂಕೇತವೂ ಆಗುವಂತೆ ನೋಡಿಕೊಂಡದ್ದು ಗಾಂಧೀಜಿ ಯವರ ಚಾಣಾಕ್ಷತನವೇ ಹೌದು. ಗಾಂಧೀಜಿಯವರು ಖಾದಿಯ ಉತ್ಪಾದನೆ ಮತ್ತು ಬಳಕೆಗೆ ಪಟ್ಟು ಹಿಡಿದಿದ್ದು ಕೇವಲ ಪ್ರತಿಭಟನೆಯ ಸಂಕೇತವೆಂದರೆ ತಪ್ಪಾಗುತ್ತದೆ. ಖಾದಿ ನಿಜ ಅರ್ಥದಲ್ಲಿ ದೇಶದ ಮುಚ್ಚಿಹೋಗಿದ್ದ ಗುಡಿ ಕೈಗಾರಿಕೆಗಳು ಬಡವರ್ಗಗಳ ನಿರುದ್ಯೋಗ, ಬಡತನದ ಸಂಕಟದ ನಿವಾರಣೆಯ ಪ್ರಯತ್ನ. ಎಲ್ಲರ ಕೈಗೂ ನೂಲುವ, ನೇಯುವ, ಮಾರುವ ಕೆಲಸಗಳು ದೊರೆತು ಅಲ್ಪ ಮಟ್ಟಿಗಾ ದರೂ ಅವರುಗಳ ಬಡತನದ ಬವಣೆಯ ನಿವಾರಣೆಯ ದಿಟ್ಟ ಪ್ರಯತ್ನ. ಭಾರತವು ಸಂಕಷ್ಟದ ಸಮಯದಲ್ಲಿದ್ದಾಗ ಮಹಾತ್ಮರು ತೋರಿದ ದಾರಿ, ಪ್ರಯತ್ನ ವಂದನಾರ್ಹನೀಯ. ಇಂತಹ ಸನ್ನಿವೇಶದಲ್ಲಿ ಮಹಾತ್ಮರು ಭಾರತದ ಜ್ಯೋತಿ ಯಂತೆ ತೋರಿಬಂದರು. ಅಂದು ಬುದ್ಧ ಮಹಾಶಯ ‘ಏಷ್ಯಾದ ಬೆಳಕಾಗಿದ್ದರೆ’, ಇಂದಿನ ಗಾಂಧಿ ಮಹಾತ್ಮರು ಶಾಂತಿದೂತನಾಗಿ ‘ವಿಶ್ವದ ದಾರಿದೀಪ’ವಾಗಿದ್ದಾರೆ.

Tags:
error: Content is protected !!