Mysore
25
light rain

Social Media

ಶುಕ್ರವಾರ, 09 ಅಕ್ಟೋಬರ್ 2026
Light
Dark

ವಯನಾಡಿನಲ್ಲಿ ಭೂಕುಸಿತ: ನಾಪತ್ತೆಯಾದ ಐವರ ಶೋಧ ಕಾರ್ಯಕ್ಕೆ ಮಳೆ ಅಡ್ಡಿ

ವಯನಾಡು: ಬೆಳಿಗ್ಗೆಯಿಂದಲೇ ವಯನಾಡಿನಲ್ಲಿ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾಗಿರುವ ಐವರಿಗೆ ಶೋಧ ಕಾರ್ಯ ಕಾರ್ಯ ನಡೆಯುತ್ತಿದೆ.

ಮೆಪ್ಪಾಡಿ ಬಳಿ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ನಾಪತ್ತೆಯಾಗಿರುವ ಕಾರ್ಮಿಕರ ಶೋಧ ಕಾರ್ಯಕ್ಕೆ ಮಳೆ ತೀವ್ರ ಅಡ್ಡಿಪಡಿಸುತ್ತಿದೆ. ಮಣ್ಣು ಇಡಿಯಾಗಿ ಕುಸಿಯುತ್ತಿರುವುದರಿಂದ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ.

ಮಣ್ಣಿನಲ್ಲಿ ಭಾರೀ ಯಂತ್ರೋಪಕರಣಗಳು ಹಾಗೂ ವಾಹನಗಳು ಸಿಲುಕಿಕೊಂಡಿವೆ. ಮಣ್ಣಿನ ಅಡಿಯಿಂದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

Tags:
error: Content is protected !!