Mysore
28
overcast clouds

Social Media

ಸೋಮವಾರ, 06 ಜುಲೈ 2026
Light
Dark

ಆಂದೋಲನ ಸಾರ್ಥಕ ಪಯಣ : ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಎಚ್.ಎಸ್.ದಿನೇಶ್‌ ಕುಮಾರ್‌

ಜಾಗತಿಕ ತಾಪಮಾನ ವಿಪರೀತ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಇಡೀ ಮಾನವ ಕುಲವೇ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.

ಗಿಡ-ಮರಗಳು ನಿಸರ್ಗ ನಮಗೆ ಒದಗಿಸಿರುವ ಅತ್ಯುತ್ತಮ ಉಡುಗೊರೆ. ಅಲ್ಲದೆ, ಮರಗಳು ಮನುಷ್ಯನ ಜೀವನ ಶೈಲಿಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ಮರಗಳ ಹನನ ನಿರಂತರವಾಗಿ ನಡೆಯುತ್ತಿರುವುದು ವಿಪರ್ಯಾಸ.

ಇದನ್ನು ತಡೆಗಟ್ಟಬೇಕಾದ ಸ್ಥಳೀಯ ಸಂಸ್ಥೆಗಳು, ಸಂಬಂಧಪಟ್ಟ ಇಲಾಖೆಗಳು ಕೂಡ ಜವಾಬ್ದಾರಿ ಮರೆತಿವೆ. ಮರಗಳ ಕಳ್ಳ ಸಾಗಾಣಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಮರಗಳನ್ನು ನಿರಂತರವಾಗಿ ಕಡಿಯಲಾಗುತ್ತಿದೆ. ಹೀಗೇ ಮುಂದುವರಿದಲ್ಲಿ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮರಗಳು ಮನುಷ್ಯರಿಗೆ ನೆರಳು ಒದಗಿಸುತ್ತವೆ. ಹಣ್ಣು, ಹೂಗಳನ್ನು ನೀಡುತ್ತವೆ. ಅರಳಿ, ಬಿಲ್ವ, ಬೇವು ಮತ್ತಿತರ ಔಷಧಿ ಗುಣಗಳುಳ್ಳ ಮರಗಳು ಮಾನವನ ನೆರವಿಗೆ ನಿಂತಿವೆ. ಸೂಕ್ಷ್ಮ ಜೀವಿಗಳು, ಕೀಟಗಳು, ಪಕ್ಷಿಗಳು ಬದುಕಿರುವುದೇ ಮರಗಿಡಗಳ ಆಶ್ರಯದಲ್ಲಿ.

ಬೆಳ್ಳಂಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ ನಿನಾದಕ್ಕೆ ಮರಗಳೇ ಕಾರಣ. ಬೇಸಿಗೆಯ ಕಾಲದಲ್ಲಂತೂ ಮರಗಳ ಅಗತ್ಯತೆ ಮಾನವನಿಗೆ ಹೆಚ್ಚು ಗೊತ್ತಾಗುತ್ತದೆ. ಬಹಳ ದಣಿದ ವೇಳೆ ತಂಪಾದ ನೆರಳು ಹಾಗೂ ತಂಗಾಳಿಯನ್ನು ನೀಡುವುದು ಕೂಡ ಇವೇ ಮರಗಳು. ಕಾಲ ಕಾಲಕ್ಕೆ ಮಳೆ ಸುರಿಯಲು ಅರಣ್ಯಗಳೇ ಕಾರಣ.

ಜನರಿಗೆ ಆಹಾರ, ಹಣ್ಣುಗಳು, ಹೂಗಳು, ಮನೆ ನಿರ್ಮಾಣಕ್ಕಾಗಿ ಮತ್ತು ಪೀಠೋ ಪಕರಣ ತಯಾರಿಸಲು ಬೇಕಾದ ಮರಗಳನ್ನು ಒದಗಿಸಲು, ಅಡುಗೆ ಒಲೆಗೆ ಬಳಸಲು, ನೀಲಗಿರಿ, ಶ್ರೀಗಂಧದಂತಹ ತೈಲವನ್ನು ನೀಡುವ ಹಾಗೂ ಸಾಕಷ್ಟು ಕೊಡುಗೆ ನೀಡುವ ಮರಗಳನ್ನು ಮಾನವ ಮಾತ್ರ ನಿರ್ಲಕ್ಷಿಸುತ್ತಲೇ ಬಂದಿದ್ದಾನೆ.

ಗಾಳಿಯನ್ನು ಶುದ್ಧೀಕರಿಸುವ ಒಂದು ಪ್ರಮುಖ ಪಾತ್ರವನ್ನು ಮರಗಿಡಗಳು ನಿರ್ವಹಿಸುತ್ತವೆ. ಮಳೆ ಮೋಡಗಳನ್ನು ಆಕರ್ಷಿಸಲು ಮತ್ತು ಮಣ್ಣಿನ ಸವಕಳಿ ತಡೆಗಟ್ಟಲು ಮತ್ತು ಭೂಮಿಯ ಸಂರಕ್ಷಣೆಗೆ ಕೂಡ ಮರಗಳ ಅಗತ್ಯತೆ ಹೆಚ್ಚಿದೆ. ಇಂದು ಜನಸಂಖ್ಯೆ ಹೆಚ್ಚಿದಂತೆ ಮನೆಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿಗಾಗಿ ಅರಣ್ಯಗಳನ್ನು ನಾಶ ಮಾಡಲಾಗುತ್ತಿದೆ. ಇದರಿಂದ ಮಳೆ ಕಡಿಮೆಯಾಗುತ್ತಿದೆ, ಕಾಯಿಲೆಗಳು ಹೆಚ್ಚುತ್ತಿವೆ. ಅಲ್ಲದೆ, ಪ್ರಾಣಿ ಪಕ್ಷಿಗಳ ಸಂತತಿ ಕಡಿಮೆಯಾಗುತ್ತಿವೆ. ಹೀಗೆ ಆದರೆ ನಮ್ಮ ಮುಂದಿನ ಪೀಳಿಗೆಗೆ ಅರಣ್ಯವನ್ನು ಚಿತ್ರಪಟಗಳಲ್ಲಿ ಎಲ್ಲರ ಹೊಣೆ ೦೨ ಮೈಸೂರು ದೊಡ್ಡ ನಗರವಲ್ಲ. ಇರುವ ತೋರಿಸಬೇಕಾದ ಪರಿಸ್ಥಿತಿ ಬರುತ್ತದೆ. ಎಲ್ಲ ಜೀವಿಗಳ ರಕ್ಷಣೆಯ ಹೊಣೆ ನಮ್ಮದು. ಬೇಸಿಗೆಯ ಕಾಲದಲ್ಲಿ ಕಾಡ್ಗಿಚ್ಚು ನಿಯಂತ್ರಿಸಬೇಕು. ಹೆಚ್ಚು ಗಿಡಗಳನ್ನು ನೆಡಬೇಕು. ಮರಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು.

ವನ ಮಹೋತ್ಸವ
ಮರಗಳನ್ನು ಉಳಿಸಬೇಕು, ಬೆಳೆಸಬೇಕು ಹಾಗೂ ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ಕೂಡ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ. ಅದಕ್ಕಾಗಿ ವನಮಹೋತ್ಸವ ಎಂಬ ಕಾರ್ಯಕ್ರಮವನ್ನು ಸರ್ಕಾರ ಕೈಗೊಂಡಿದೆ. ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪರಿಸರ ತಜ್ಞರು ಹಾಗೂ ಅರಣ್ಯ ಪ್ರಿಯರಿಂದ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಆದರೂ ಕದ್ದುಮುಚ್ಚಿ ಮರಗಳ ಹನನ ನಡೆಯುತ್ತಲೇ ಇದೆ. ಇನ್ನು ಮೈಸೂರು ವಿಚಾರಕ್ಕೆ ಬಂದಲ್ಲಿ ಕಳೆದ ಹಲವು ವರ್ಷಗಳಿಂದ ನಗರದ ವಿವಿಧೆಡೆ ಸಾವಿರಾರು ಮರಗಳನ್ನು ಕಡಿಯಲಾಗಿದೆ. ನಗರದ ಕಾರಂಜಿಕೆರೆ ರಸ್ತೆಯಲ್ಲಿ ಈ ಹಿಂದೆ ಜೋಡಿ ರಸ್ತೆಗಾಗಿ ನೂರಾರು ಮರಗಳನ್ನು ಕಡಿಯಲಾಗಿತ್ತು. ಅದರಲ್ಲಿ ಅಮೂಲ್ಯವಾದ ಬೇವಿನ ಮರಗಳೇ ಹೆಚ್ಚಿದ್ದವು.

ಇತ್ತೀಚೆಗಷ್ಟೆ ಮೈಸೂರಿನ ನಜರಬಾದ್ ಬಳಿಯ ಪೊಲೀಸ್ ತರಬೇತಿ ಶಾಲೆಯ ಮುಂಭಾಗದ ಹೈದರ್ ಅಲಿ ರಸ್ತೆಯಲ್ಲಿ ಅಗಲೀಕರಣ ನೆಪದಲ್ಲಿ ಐವತ್ತಕ್ಕೂ ಹೆಚ್ಚು ಮರಗಳನ್ನು ಧರೆಗುರುಳಿಸಲಾಯಿತು. ಪರಿಸರ ಪ್ರಿಯರು ಸಾಕಷ್ಟು ಹೋರಾಟ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೇ ರೀತಿ ನಗರದ ಹುಣಸೂರು ರಸ್ತೆ, ಕೆಆರ್‌ಎಸ್ ರಸ್ತೆ, ಗನ್‌ಹೌಸ್ ಬಳಿಯ ರಸ್ತೆ ಹೀಗೆ ಹೇಳುತ್ತಾ ಹೋದಲ್ಲಿ ನೂರಾರು ರಸ್ತೆಗಳಲ್ಲಿ ಅಗಲೀಕರಣದ ಹೆಸರಿನಲ್ಲಿ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಇದು ಇನ್ನೂ ಮುಂದುವರಿದಿದೆ.

ಮೈಸೂರಿಗೆ ಫೈ ಓವರ್‌ಗಳು ಏಕೆ?
ಮದ್ರಾಸ್ ಐಐಟಿ ಯಲ್ಲಿ ಕಾಡಿನ ಮಧ್ಯೆ ಕಾಲೇಜು ನಿರ್ಮಾಣ ಮಾಡ ಲಾಯಿತು. ಅದು ಇಂದೂ ಕೂಡ ಹಾಗೆಯೇ ಇದೆ. ಪರಿಸರದ ನಡುವೆ ಅಧ್ಯಯನ ಮಾಡಿದಲ್ಲಿ ಅದರ ತೀಕ್ಷ್ಣತೆಯೇ ಬೇರೆ ಎನ್ನುತ್ತಾರೆ ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ವಿ ಶೆಣೈ. ಆಸ್ಪತ್ರೆ, ಕಾರ್ಖಾನೆ, ಶಾಲೆಯಂತಹ ಕಟ್ಟಡಗಳ ನಿರ್ಮಾಣಕ್ಕೆ ಅತ್ಯಗತ್ಯವಿದ್ದಲ್ಲಿ ಮರ ಕಡಿಯುವುದ ರಲ್ಲಿ ಅರ್ಥವಿದೆ. ಶಾಸಕರು, ಸಂಸದರ ಅನುದಾನ ಕ್ಕಾಗಿ ಮಾತ್ರ ಮರಗಳನ್ನು ಕಡಿಯಬಾರದು ಎಂಬುದು ಶೆಣೈ ಅವರ ಅಭಿಮತ. ಸಾಂಸ್ಕೃತಿಕವಾಗಿ ಪರಂಪರಾಗತವಾಗಿ ಮೈಸೂರಿಗೆ ತನ್ನದೇ ಆದ ಹೆಸರಿದೆ. ದೇಶ, ವಿದೇಶಗಳಿಂದ ಇಲ್ಲಿಗೆ ಬರುವವರು ದೊಡ್ಡದೊಡ್ಡ ಮಾಲ್‌ಗಳು, ರಸ್ತೆಗಳು – ಓವರ್‌ಗಳನ್ನು ನೋಡಲು ಬರುವುದಿಲ್ಲ. ಮೈಸೂರು ಹೇಗಿದೆ? ಇಲ್ಲಿನ ಸಂಸ್ಕೃತಿ, ಆಹಾರ ಪದ ತಿ, ಅರಮನೆ, ಚಾಮುಂಡಿ ಬೆಟ್ಟವನ್ನು ನೋಡಲು ಬರುತ್ತಾರೆ. ಹೀಗಿರುವಾಗ ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಪಾರಂಪರಿ ಕತೆಗೆ ಕೊಡಲಿ ಪೆಟ್ಟು ನೀಡುವುದು ಸರಿಯೇ? ಒಟ್ಟಾರೆ ಪರಿಸರ ಉಳಿಯಬೇಕು, ಮರಗಳನ್ನು ಕಡಿಯಬಾರದು ಎಂಬ ಮನಸ್ಥಿತಿ ಎಲ್ಲರಲ್ಲಿಯೂ ಮೂಡುವಂತಾಗಬೇಕು. ಈ ಸಂಬಂಧ ಜಾಗೃತಿ ಎಂಬುದು ನಿರಂತರವಾಗಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸದೆ ಬಿಡುವುದಿಲ್ಲ.

Tags:
error: Content is protected !!