Mysore
28
overcast clouds

Social Media

ಶನಿವಾರ, 20 ಜೂನ್ 2026
Light
Dark

ಓದುಗರ ಪತ್ರ: ಎಥೆನಾಲ್: ಪ್ರಚಾರದ ಗಿಮಿಕ್ಕೋ?

dgp murder case

ಜೂನ್ ೧೪ರಂದು ಆರಂಭವಾದ ಎಥೆನಾಲ್ ಜಗೃತಿ ಕೇವಲ ಕಾರ್ಪೊರೇಟ್ ಪ್ರಚಾರದ ಗಿಮಿಕ್‌ನಂತೆ ಕಾಣುತ್ತಿದೆ. ಪೆಟ್ರೋಲ್‌ಗೆ ಶೇ.೨೦ ಮಿಶ್ರಣದ ಗುರಿ ಮತ್ತು ಲೀಟರ್‌ಗೆ ೨೩.೫೬ ಕಿಮೀ ಮೈಲೇಜ್ ಆಕರ್ಷಕವಾಗಿದ್ದರೂ ಬರೋಬ್ಬರಿ ರೂ.೭,೨೩,೯೦೦ ಬೆಲೆಯ ಫ್ಲೆಕ್ಸ್ ಕಾರುಗಳನ್ನು ಕೊಳ್ಳುವ ಶಕ್ತಿ ಸಾಮಾನ್ಯ ಜನರಿಗಿದೆಯೇ? ರಾಜ್ಯದಲ್ಲಿ ಎಥೆನಾಲ್ ಇಂಧನ ಕೇಂದ್ರಗಳೇ ಇಲ್ಲದಿರುವಾಗ ಇಂತಹ ವಾಹನಗಳನ್ನು ಮಾರುಕಟ್ಟೆಗೆ ತರುವುದು ಹಾಸ್ಯಾಸ್ಪದ.

ರೈತರ ಆದಾಯ ಹೆಚ್ಚಿಸುವ ಹೆಸರಿನಲ್ಲಿ ಆಡಳಿತಶಾಹಿ ಬೂಟಾಟಿಕೆ ಮಾಡುವುದನ್ನು ನಿಲ್ಲಿಸಬೇಕು.ಕಬ್ಬು, ಮೊಲಾಸಿಸ್, ಕೃಷಿ ತ್ಯಾಜ್ಯ, ಇಂಧನ ಕ್ರಾಂತಿ, ಆಮದು ವೆಚ್ಚ, ಫ್ಲೆಕ್
ಫ್ಲ್ಯುಯೆಲ್ಸ್, ತಂತ್ರಜ್ಞಾನ, ಕಾರ್ಬನ್ ಹೊರಸೂಸುವಿಕೆ, ಮಾಲಿನ್ಯ ನಿಯಂತ್ರಣ, ಗ್ರಾಮೀಣ ಆರ್ಥಿಕತೆ, ಮೂಲಸೌಕರ್ಯ, ಪೂರೈಕೆ ಸರಪಳಿ, ಸ್ಥಿರ ಬೇಡಿಕೆ, ಪರ್ಯಾಯ ಇಂಧನ, ಮೌಲ್ಯವರ್ಧನೆ, ಸ್ವಾವಲಂಬನೆ, ತೆರಿಗೆ ವಿನಾಯಿತಿ, ಗ್ರಾಹಕ ಜಾಗೃತಿ, ಇಂಜಿನ್ ಕಾರ್ಯವೈಖರಿ ಹಾಗೂ ಪರಿಸರಸ್ನೇಹಿ ಉತ್ಪಾದನೆಯನ್ನು ಸರ್ಕಾರ ತಕ್ಷಣವೇ ಬಲಪಡಿಸದಿದ್ದರೆ, ಈ ಯೋಜನೆ ಕೇವಲ ಹಗಲುಗನಸಾಗಿ ಉಳಿಯಲಿದೆ.

-ಡಾ.ಎಚ್.ಕೆ. ವಿಜಯಕುಮಾರ್, ಬೆಂಗಳೂರು

Tags:
error: Content is protected !!