ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್ ಬಂಪರ್ ಕೊಡುಗೆ ನೀಡಿದ್ದಾರೆ.
ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ ವರೆಗಿನ ಬೆಳೆ ಸಾಲಮನ್ನಾ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದರೊಂದಿಗೆ 75,000 ರೂಗಿಂತಲೂ ಹೆಚ್ಚು ಬೆಳೆ ಸಾಲ ಪಡೆದವರಿಗೆ 35,000ರೂ ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ರಾಜ್ಯಾದ್ಯಂತ ಸುಮಾರು 14.43 ಲಕ್ಷಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಕ್ರಮದಿಂದ ಸರ್ಕಾರಕ್ಕೆ 5,932.23 ಕೋಟಿ ರೂ ಹೊರೆಯಾಗಲಿದೆ.




