ಮೈಸೂರಿನ ಹೆಬ್ಬಾಳ್ ಬಡಾವಣೆಯ ಸೂರ್ಯಬೇಕರಿ ವೃತ್ತದ ಸಮೀಪದಲ್ಲಿರುವ ಎರಡನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕವಾಗಿ ಯುಜಿಡಿ ಪೈಪ್‌ಲೈನ್‌ಕಾಮಗಾರಿ ನಡೆಸಲಾಗುತ್ತಿದೆ. ಒಂದುಕಡೆ ಪೈಪ್‌ಲೈನ್‌ಗಾಗಿ ಆರು-ಏಳು ಅಡಿ ಆಳವಾದ ಗುಂಡಿ ಅಗೆದು ಅದರ ಮಣ್ಣನ್ನು ಬೆಟ್ಟದಂತೆ ಗುಡ್ಡೆ ಮಾಡಿ ರಸ್ತೆಯ ಮೇಲೆ ಹಾಕುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ಹರ ಸಾಹಸಮಾಬೇಕಾಗಿದೆ.
ಮತ್ತೊಂದೆಡೆ ಹೊಸದಾಗಿ ಕಾಂಕ್ರಿಟ್ ಸ್ಲ್ಯಾಬ್ ಹಾಕುತ್ತೇವೆಂದು ಮನೆಗಳ ಮುಂದಿನ ಚರಂಡಿಗೆ ಹಾಕಿದ್ದ ಚಪ್ಪಡಿ ಕಲ್ಲುಗಳನ್ನು ಕಿತ್ತೊಗೆದಿದ್ದು, ಹಲವಾರು ದಿನಗಳಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಹೋಗಲು ಹಾಗೂ ತಮ್ಮ ದ್ವಿಚಕ್ರ ವಾಹನಗಳನ್ನು ಮನೆಯ ಮುಂದೆ ನಿಲ್ಲಿಸಲೂ ಸಾಧ್ಯವಾಗುತ್ತಿಲ್ಲ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಯುಜಿಡಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಹಾಗೂ ಈ ಚರಂಡಿಗೆ ಕೂಡಲೇ ಕಾಂಕ್ರಿಟ್ ಸ್ಲ್ಯಾಬ್‌ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
-ಆರ್. ಯಶಸ್ ಹೆಬ್ಬಾಳ್, ಮೈಸೂರು





