ಬೆಂಗಳೂರು: ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶಾತಿ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ-2026)ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಟಿಸಿದರು. ಒಟ್ಟು 2,92,782 ವಿದ್ಯಾರ್ಥಿಗಳು ಸಿಇಟಿ ಅರ್ಹತೆ ಪಡೆದಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಜಯನಗರದ ಆರ್.ವಿ.ಪದವಿ ಪೂರ್ವ ಕಾಲೇಜಿನ ತನಿಷಾ ಕಾರ್ತಿಕ್ ಮೊದಲ ರ‍್ಯಾಂಕ್ ಗಳಿಸಿದರೆ, ಮಹಾಲಕ್ಷ್ಮಿಪುರದ ಕೆ.ಎಂ, ಡಬ್ಲ್ಯು.ಎ. ಪದವಿಪೂರ್ವ ಕಾಲೇಜಿನ ಸೃಜನ್ ಎರಡನೇ ರ‍್ಯಾಂಕ್ ಹಾಗೂ ಜಯನಗರದ ಆರ್.ವಿ.ಪಿಯು ಕಾಲೇಜಿನ ನೀನಾದ್ ವಶಿಷ್ಟ ಮೂರನೇ ಸ್ಥಾನ ಗಳಿಸಿದ್ದಾರೆ.
ಈ ಬಾರಿ ರಾಜ್ಯಾದ್ಯಂತ ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ನಡೆದ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 3,09,014 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯನ್ನು ರಾಜ್ಯದ 745 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಪಾರದರ್ಶಕತೆಗಾಗಿ 15,265 ಸಿಸಿಟಿವಿ ಕ್ಯಾಮೆರಾಗಳು, ವೆಬ್‍ಕಾಸ್ಟಿಂಗ್ ಹಾಗೂ ಮುಖಚಹರೆ ಪತ್ತೆ ಹಚ್ಚುವ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದರು.




