ಮಾಂಸಾಹಾರ ಮಾಡುತ್ತಿದ್ದ ಕಾಲದ ಮತ್ತು ಅದಕ್ಕೆ ಹಿಂದಿನ ನನ್ನ ಕೆಲವು ದೋಷಗಳನ್ನು ಹೇಳಬೇಕಾದುದು ಇನ್ನೂ ಬಾಕಿಯಿದೆ. ಅವು ನನ್ನ ಮದುವೆಯಾದ ಮೇಲೋ ಅಥವಾ ಅದಕ್ಕೆ ಮುಂಜೆಯೋ ಸಂಭವಿಸಿದವು.
ನಾನೂ ನಮ್ಮ ಒಬ್ಬ ನೆಂಟನೂ ಸಿಗರೇಟು ಸೇದುವು ದರಲ್ಲಿ ತೊಡಗಿದೆವು. ನಮ್ಮ ಹತ್ತಿರ ದುಡ್ಡು ಇರಲಿಲ್ಲ. ಸಿಗರೇಟು ಸೇದುವುದರಲ್ಲಿ ಏನೋ ಲಾಭವಿದೆಯೆಂದು ನಾವು ಎಣಿಸಿರಲಿಲ್ಲ. ಅದರ ವಾಸನೆ ನಮ್ಮನ್ನು ಆಕರ್ಷಿಸ ಲಿಲ್ಲ. ಹೊಗೆ ಬಿಡುವುದರಲ್ಲಿ ಏನೋ ಒಂದು ಆನಂದವಿದೆ ಎಂಬುದನ್ನಂತೂ ತಿಳಿದಿದ್ದೆವು. ನಮ್ಮ ಚಿಕ್ಕಪ್ಪನಿಗೆ ಅದರ ರೂಢಿ ಇತ್ತು. ಆತನೂ ಉಳಿದವರೂ ಸೇದುವುದನ್ನು ನೋಡಿ ನಾವೂ ಹಾಗೆಯೇ ಮಾಡಬೇಕೆಂದು ಇಚ್ಛೆಯುಂಟಾಯಿತು. ನಮ್ಮ ಕೈಯಲ್ಲಿ ಕಾಸಂತೂ ಇರಲಿಲ್ಲ. ನಮ್ಮ ಚಿಕ್ಕಪ್ಪ ಸೇದಿ ಎಸೆದಿದ್ದ ತುಂಡುಗಳನ್ನು ಕದ್ದು ಸೇದತೊಡಗಿದೆವು.
ಆದರೆ ಆ ತುಂಡುಗಳು ಯಾವಾಗಲೂ ಸಿಗು ತಿರಲಿಲ್ಲ. ಸಿಕ್ಕಿದರೂ ಅವುಗಳಿಂದ ತುಂಬ ಹೊಗೆಯು ಬರುತ್ತಿರಲಿಲ್ಲ. ಆದುದರಿಂದ ಮನೆಯ ನೌಕರನ ಜೇಬಿನಿಂದ ಒಂದೆರಡು ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವೆವೆಂದು ಹೆದರಿಸಿ ದರೆ, ನಾನು ಅದನ್ನು ಲಕ್ಷಿಸುವುದಿಲ್ಲ.
ಆತ್ಮಹತ್ಯೆಯ ವಿಚಾರದಿಂದ ಒಂದು ಪರಿಣಾಮ ವಾಯಿತು. ನಾವಿಬ್ಬರೂ ಸಿಗರೇಟು ತುಂಡುಗಳನ್ನು ಸೇದುವುದನ್ನೂ ಆಳಿನ ಜೇಬಿನಿಂದ ಕಾಸು ಕದಿಯುವು ದನ್ನೂ ಬಿಟ್ಟು ಬಿಟ್ಟೆವು. ದೊಡ್ಡವನಾದ ಮೇಲೆ ಸಿಗರೇಟು ಸೇದುವ ಆಸೆ ನನಗೆ ಎಂದೂ ಉಂಟಾಗಿಲ್ಲ. ಈ ಅಭ್ಯಾಸ ಅಸಹ್ಯ, ಅಸಭ್ಯ, ಹಾನಿಕಾರಕ ಎಂದು ನಾನು ತಿಳಿದಿದ್ದೇನೆ. ಜಗತ್ತಿನಲ್ಲಿ ಬೀಡಿ, ಸಿಗರೇಟು ಚಟ ಇಷ್ಟು ಏಕೆ ಎಂಬುದು ನನಗೆ ಅರ್ಥವಾಗಿಲ್ಲ. ರೈಲುಗಾಡಿಯಲ್ಲಿ ಕುಳಿತ ಜನ ಸಿಗರೇಟು ಸೇದುತ್ತಿದ್ದರೆ, ಅಲ್ಲಿ ಕುಳಿತುಕೊಳ್ಳಲು ನನಗೆ ಕಷ್ಟವಾಗುತ್ತದೆ. ಬಿಲ್ಲೆಗಳನ್ನು ಕದ್ದು, ದೇಶೀ ಸಿಗರೇಟುಗಳನ್ನು ಸೇದುತ್ತಿದ್ದೆವು. ಆದರೆ ಅವುಗಳನ್ನು ಎಲ್ಲಿ ಇಟ್ಟು ಕೊಳ್ಳುವುದು ಎಂಬುದೇ ಸಮಸ್ಯೆಯಾಗಿತ್ತು. ಹಿರಿ ಯರ ಎದುರಿಗೆ ಸೇದುವುದು ಸಾಧ್ಯವಿರಲಿಲ್ಲ. ನಾಲ್ಕಾರು ಬಿಲ್ಲೆಗಳನ್ನು ಕದ್ದು ಕೆಲವು ವಾರ, ಸಾಗಿಸಿದೆವು. ಇಷ್ಟರಲ್ಲಿ ‘ಒಂದು ಗಿಡವಿದೆ (ಅದರ ಹೆಸರು ಜ್ಞಾಪಕವಿಲ್ಲ) ಅದನ್ನು ಸಿಗರೇಟಿನ ಹಾಗೆ ಹಚ್ಚಿಕೊಂಡು ಸೇದಬಹುದೆಂದು ತಿಳಿಯಿತು. ಅದನ್ನೇ ಹೊತ್ತಿಸಿಕೊಂಡು ಸೇದ ತೊಡಗಿದೆವು.
ಆದರೆ ನಮಗೆ ಅದರಿಂದ ಸಂತೋಷವಾಗಲಿಲ್ಲ. ನಮ್ಮ ಪರಾಧೀನತೆ ನಮ್ಮನ್ನು ಚುಚ್ಚತೊಡಗಿತು. ದೊಡ್ಡವರ ಚುಚ್ಚತೊಡಗಿತು. ದೊಡ್ಡವರ ಅಪ್ಪಣೆಯಿಲ್ಲದೆ ಏನೂ ಮಾಡುವ ಹಾಗಿಲ್ಲ. ಇದನ್ನು ಸಹಿಸಲು ಅಸಾಧ್ಯವಾಯಿತು. ಕೊನೆಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆವು.
ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ವಿಷವನ್ನು ಎಲ್ಲಿಂದ ತರುವುದು? ದತ್ತೂರದ ಬೀಜ ತಿಂದರೆ ಮನುಷ್ಯ ಸಾಯುವನೆಂದು ಕೇಳಿದ್ದೆವು. ಕಾಡಿನಲ್ಲಿ ಅಲೆದು ಬೀಜವನ್ನು ತಂದೆವು. ಮುಹೂರ್ತವನ್ನು ಒಂದು ದಿನ ಸಂಜೆಗೆ ಇಟ್ಟುಕೊಂಡೆವು. ಕೇದಾರಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ದೀಪಕ್ಕೆ ತುಪ್ಪ ಹಾಕಿ, ಏಕಾಂತ ಸ್ಥಳಕ್ಕೆ ಹೋದೆವು. ಆದರೆ ವಿಷ ಕುಡಿಯಲು ಧೈರ್ಯವಾಗಲಿಲ್ಲ. ತತ್‌ಕ್ಷಣ ಪ್ರಾಣ ಹೋಗದಿದ್ದರೋ? ಕೊನೆಗೆ ಆತ್ಮಹತ್ಯೆ ಯಿಂದ ಲಾಭವೇನು? ಪರಾಧೀನರಾಗಿದ್ದರೆ ತಾನೆ ಏನು?ಮುಂತಾದ ವಿಚಾರಗಳು ಮನಸ್ಸಿನಲ್ಲಿ ಬಂದವು. ಮೂರು ನಾಲ್ಕು ಬೀಜಗಳನ್ನು ತಿಂದೆವು. ಇನ್ನು ಹೆಚ್ಚಿಗೆ ತಿನ್ನಲು ಧೈರ್ಯ ಬರಲಿಲ್ಲ. ಇಬ್ಬರೂ ಸಾವಿಗೆ ಹೆದರಿದೆವು. ರಾಮದೇವರ ದೇವಸ್ಥಾನಕ್ಕೆ ಹೋಗಿ ದರ್ಶನ ಹೊಂದಿ ಶಾಂತರಾಗಿ ಆತ್ಮ ಹತ್ಯೆಯ ವಿಚಾರವನ್ನು ಮರೆಯಬೇಕೆಂದು ನಿಶ್ಚಯಿಸಿದೆವು.
ಆತ್ಮಹತ್ಯೆಯ ವಿಚಾರ ಮಾಡುವುದು ಸುಲಭ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಸುಲಭವಲ್ಲ. ಅಂದಿನಿಂದ ಸಿಗರೇಟು ಚೂರುಗಳನ್ನು ಕದ್ದುದು, ಸಿಗರೇಟಿಗಾಗಿ ನೌಕರನ ಜೇಬಿನ ಕಾಸು ಕದ್ದುದು, ಇದಕ್ಕಿಂತ ಮುಖ್ಯವಾದುದು ಇವುಗಳಾದ ಮೇಲೆ ನಾನು ಮಾಡಿದ ಕಳ್ಳತನ, ಸಿಗರೇಟಿಗಾಗಿ ಕಾಸು ಕದ್ದಾಗ ನನಗೆ 12-13 ಅಥವಾ ಇನ್ನೂ ಕಡಿಮೆ ವಯಸ್ಸು. ಮತ್ತೊಂದು ಕಳ್ಳತನ ಮಾಡಿದಾಗ ನನ್ನ ವಯಸ್ಸು ಹದಿನೈದು ಆಗಿದ್ದಿತು. ಆ ಕಳವು ನನ್ನ ಮಾಂಸಾಹಾರಿ ಅಣ್ಣನ ಚಿನ್ನದ ಕಡಗದ ಚೂರು. ಆ ಅಣ್ಣ ಸುಮಾರು ಇಪ್ಪತ್ತೈದು ರೂಪಾಯಿ ಸಾಲ ಮಾಡಿದ್ದನು. ಈ ಸಾಲವನ್ನು ಹೇಗೆ ತೀರಿಸುವುದೆಂದು ನಾವಿಬ್ಬರೂ ಯೋಚಿಸಿದೆವು. ಅವನ ಕೈಯಲ್ಲಿ ಚಿನ್ನದ ಕಡಗವಿತ್ತು. ಅದರಿಂದ ಒಂದು ಚೂರನ್ನು ಕತ್ತರಿಸಿಕೊಳ್ಳುವುದೇನೂ ಕಷ್ಟವಾಗಲಿಲ್ಲ.
ಕಡಗ ಕತ್ತರಿಸಿ ಸಾಲ ತೀರಿಸಿದುದಾಯಿತು. ನನಗೆ ಅದನ್ನು ಸಹಿಸಲಾಗಲಿಲ್ಲ. ಮುಂದೆಂದೂ ಕಳ್ಳತನ ಮಾಡು ವುದಿಲ್ಲವೆಂದು ನಿಶ್ಚಯಿಸಿದೆ. ತಂದೆಯಲ್ಲಿ ಹೋಗಿ ತಪ್ಪು ಒಪ್ಪಿಕೊಳ್ಳಬೇಕೆಂದು ಮನಸ್ಸಿಗೆ ಬಂತು. ಆದರೆ ಅವರ ಮುಂದೆ ಬಾಯಿ ತೆರೆಯುವುದೇ ಕಷ್ಟವಾಯಿತು. ಅವರು ಹೊಡೆಯುವ ಭಯವೇನೂ ಇರಲಿಲ್ಲ. ಅವರು ನಮ್ಮನ್ನು ಯಾವಾಗಲೂ ಹೊಡೆದುದು ಜ್ಞಾಪಕವಿಲ್ಲ. ಅವರಿಗೆ ತುಂಬಾ ಸಂತಾಪವುಂಟಾಗಿ ತಮ್ಮ ತಲೆಯನ್ನೇ ಚಚ್ಚಿಕೊಳ್ಳಬಹುದೆಂಬ ಭಯ ನನಗಿತ್ತು. ಕೊನೆಗೆ ‘ಏನೇ ಆಗಲಿ, ಎಲ್ಲವನ್ನೂ ಅವರಿಗೆ ಹೇಳಿಬಿಡಬೇಕು. ತಪ್ಪನ್ನು ಒಪ್ಪಿಕೊಳ್ಳದೆ ಆತ್ಮಶುದ್ಧಿಯಿಲ್ಲ ಎನಿಸಿತು.
ಕೊನೆಗೆ, ಕಾಗದದಲ್ಲಿ ಎಲ್ಲವನ್ನೂ ಬರೆದು ಕೊಟ್ಟು ಅವರ ಕ್ಷಮೆ ಬೇಡಬೇಕೆಂದು ನಿರ್ಧರಿಸಿದೆ. ಕಾಗದವನ್ನು ಬರೆದುಕೊಂಡು ನಾನೇ ಅದನ್ನು ಅವರ ಕೈಗೆ ಕೊಟ್ಟೆ. ಜತೆಗೆ ನನ್ನ ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ವಿಧಿಸುವಂತೆ ಕೇಳಿ ತಾವು ದುಃಖಿಸಕೂಡದೆಂದೂ ಇನ್ನು ಮುಂದೆ ಇಂತಹ ಅಪರಾಧ ಮಾಡುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದೆ.
ತಂದೆಯವರಿಗೆ ಚೀಟಿಯನ್ನು ಕೊಟ್ಟಾಗ, ನನ್ನ ಕೈಕಾಲು ನಡುಗಿತು. ಆ ಸಮಯದಲ್ಲಿ ಅವರು ಭಗಂದರದಿಂದ ನರಳುತ್ತಿದ್ದರು. ಹಾಸಿಗೆಯನ್ನು ಬಿಟ್ಟು ಬರಿಯ ಹಲಗೆಯ ಮೇಲೆ ಮಲಗಿದ್ದರು. ನಾನು ಹೋಗಿ ಕಾಗದವನ್ನು ಕೊಟ್ಟು
ಅವರ ಮುಂದೆ ಕುಳಿತೆ. ಅವರು ಕಾಗದವನ್ನು ಓದಿದರು. ಮುತ್ತಿನಂತಹ ಕಣ್ಣೀರು ಕಾಗದದ ಮೇಲೆ ಬಿದ್ದು ಅದನ್ನು ತೋಯಿಸಿತು. ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡಿದ್ದರು. ಅನಂತರ ಚೀಟಿಯನ್ನು ಹರಿದು ಹಾಕಿದರು. ಚೀಟಿಯನ್ನು ಓದುವುದಕ್ಕಾಗಿ ಎದ್ದು ಕುಳಿತಿದ್ದವರು ಮತ್ತೆ ಮಲಗಿಕೊಂಡರು.
ನಾನು ಅತ್ತೆ, ನಮ್ಮ ತಂದೆಯ ದುಖ ಕಣ್ಣಿಗೆ ಕಾಣು ಇತ್ತು. ನಾನು ಚಿತ್ರಕಾರನಾಗಿದ್ದಿದ್ದರೆ ಅದನ್ನು ಚಿತ್ರಿಸುತ್ತಿದ್ದೆ. ಆ ದೃಶ್ಯ ಈಗಲೂ ನನ್ನ ಮನೋನೇತ್ರದ ಎದುರಿಗೆ ಸ್ಪಷ್ಟವಾಗಿದೆ.
ಆ ಕಣ್ಣೀರಿನ ಮುತ್ತಿನ ಹನಿಗಳ ಪ್ರೇಮ ಧಾರೆ, ನನ್ನ ಕಲ್ಮಶವನ್ನು ಕೊಚ್ಚಿಹಾಕಿತು. ನಾನು ಶುದ್ಧನಾದನು. ಅನು ಭವಿಸಿದವರಿಗೆ ಮಾತ್ರ ಆ ಪ್ರೇಮವೇನೆಂಬುದು ಗೊತ್ತು.
ಇದು ನನಗೆ ಅಹಿಂಸೆಯ ಪ್ರತ್ಯಕ್ಷ ಪಾಠವಾಯಿತು. ಆ ಸಮಯದಲ್ಲಿ ಇದರಲ್ಲಿ ಪಿತೃವಾತ್ಸಲ್ಯದ ಹೊರತು ಮತ್ತೇನೂ ಹೆಚ್ಚು ನನಗೆ ಕಾಣಲಿಲ್ಲ. ಆದರೆ ಇಂದು ಅದು ಶುದ್ಧ ಅಹಿಂಸೆಯೆಂದು ನನಗೆ ಗೊತ್ತು. ಅಹಿಂಸೆ, ವ್ಯಾಪಕವಾಗಿ ಹರಡಿದರೆ ಅದರ ಪ್ರಭಾವದಿಂದ ಯಾರೂ ಹೊರಗಾಗಲಾರರು. ಅದರ ಶಕ್ತಿಗೆ ಕೊನೆಯೇ ಇಲ್ಲ.
ಇಂತಹ ಶಾಂತಿಮಯ ಕ್ಷಮೆ ನಮ್ಮ ತಂದೆಯ ಸ್ವಭಾವವಾಗಿರಲಿಲ್ಲ. ಅವರು ಸಿಟ್ಟಾಗುತ್ತಾರೆ, ಬಯ್ಯುತ್ತಾರೆ, ತಮ್ಮ ತಲೆಯನ್ನು ಚಚ್ಚಿಕೊಳ್ಳಬಹುದು ಎಂದು ನಾನು ಭಾವಿಸಿದ್ದೆ.
ಆದರೆ ಅವರು ಅದ್ಭುತ ಶಾಂತಿಯ ರೂಪವೇ ಆಗಿದ್ದರು. ಇದು ನಾನು ಶುದ್ಧ ಹೃದಯದಿಂದ ನನ್ನ ತಪ್ಪನ್ನು ಒಪ್ಪಿಕೊಂಡುದುದರ ಪರಿಣಾಮವೆಂದು ಭಾವಿಸುತ್ತೇನೆ. ಕ್ಷಮಿಸುವ ಅಧಿಕಾರವುಳ್ಳವರ ಮುಂದೆ ನಮ್ಮ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಹಾಗೆ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುವ ಅತ್ಯಂತ ಪರಿಶುದ್ಧ ಪ್ರಾಯಶ್ಚಿತ್ತ. ನಾನು ಹಾಗೆ ನಡೆದುದರಿಂದ ನಮ್ಮ ತಂದೆ, ನನ್ನ ವಿಷಯದಲ್ಲಿ ನಿಶ್ಚಿಂತರಾದರು. ಅವರಿಗೆ ನನ್ನಲ್ಲಿದ್ದ ಅಗಾಧ ಪ್ರೇಮ, ಇನ್ನೂ ಅಧಿಕವಾಯಿತು.





