ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿ ಸ್ಥಾನ ಇರಬೇಕಿತ್ತು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದು ಪೋಸ್ಟ್ ಅಂತಲೇ ಇದ್ದಿದ್ದು. ಅದು ಕೈತಪ್ಪಿದ್ದಲ್ಲ ಕ್ಲಿಯರ್ ಆಗಿಯೇ ಇತ್ತು. ವಂಚಿತ ಅಂತೇನಿಲ್ಲ. ಮಂತ್ರಿಗಿರಿ ಬೇಕಾಗಿತ್ತು. ಹಾಗಾಗಿ ಕೆಪಿಸಿಸಿ ವಿಚಾರದಲ್ಲಿ ಸುಮ್ಮನಾದ್ವಿ ಎಂದು ಹೇಳಿದರು.
ಕೊನೆ ಗಳಿಗೆಯಲ್ಲಿ ಮಂತ್ರಿಸ್ಥಾನ ಅಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂತಲೇ ಇತ್ತು. ಸಿಎಂ ಹುದ್ದೆಗಿಂತ ಮೇಲೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಮಂತ್ರಿ ಸ್ಥಾನ ಇರಬೇಕಿತ್ತು ಎಂದು ಹೇಳಿದರು.





