Mysore
25
overcast clouds

Social Media

ಗುರುವಾರ, 28 ಮೇ 2026
Light
Dark

ಬೆಂಗಳೂರಿಗಿಂತ ಮಡಿಕೇರಿಯ ವಾಯುಗುಣಮಟ್ಟವೇ ಉತ್ತಮ!

ಮಡಿಕೇರಿ: ರಾಜ್ಯದಲ್ಲಿ ಮಳೆಯ ನಡುವೆಯೇ ವಾಯು ಗುಣಮಟ್ಟದಲ್ಲಿ ಬದಲಾವಣೆ ಕಂಡಿದ್ದು, ಬೆಂಗಳೂರಿನಲ್ಲಿ ಇಂದು 75 AQI ನೊಂದಿಗೆ ಸಾಧಾರಣ ಗಾಳಿ ದಾಖಲಾಗಿದೆ.

ಆದರೆ ಮಡಿಕೇರಿ ಮತ್ತು ಗದಗ ಅತ್ಯಂತ ಸ್ವಚ್ಛ ನಗರಗಳಾಗಿ ಹೊರಹೊಮ್ಮಿದ್ದು, ಜಯನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ರಸ್ತೆ ಕಾಮಗಾರಿಗಳ ಕಾರಣದಿಂದಾಗಿ ಮಾಲಿನ್ಯ ಹೆಚ್ಚುತ್ತಿದ್ದು, ಉಸಿರಾಟದ ತೊಂದರೆ ಇರುವವರು ಮಾಸ್ಕ್ ಧರಿಸಲು ಸೂಚಿಸಲಾಗಿದೆ.

ಕರ್ನಾಟಕದ ಕೆಲವು ಜಿಲ್ಲೆಗಳು ದೇಶದಲ್ಲೇ ಅತ್ಯಂತ ಸ್ವಚ್ಛ ಮತ್ತು ಕಡಿಮೆ ಮಾಲಿನ್ಯ ಹೊಂದಿದ ನಗರಗಳಾಗಿ ಹೊರಹೊಮ್ಮಿವೆ. ಮಡಿಕೇರಿ ಮತ್ತು ಗದಗ ಜಿಲ್ಲೆಗಳು ಕೇವಲ 11 ಮತ್ತು 12 AQI ದಾಖಲಿಸುವ ಮೂಲಕ ಅತ್ಯಂತ ಆರೋಗ್ಯಕರ ಹಾಗೂ ಸ್ವಚ್ಛ ಗಾಳಿಯನ್ನು ಹೊಂದಿವೆ.

Tags:
error: Content is protected !!