ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ಕಾಡಾನೆ ದಾಳಿಗೆ ತೆಂಗು ಹಾಗೂ ಮುಸುಕಿನ ಜೋಳದ ಬೆಳೆ ನಾಶವಾಗಿರುವ ಘಟನೆ ತಾಲ್ಲೂಕಿನ ಬೆಟ್ಟದಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಾಂತಪ್ಪ ಬಿನ್ ಬೆಳ್ಳಪ್ಪ ಎಂಬುವವರಿಗೆ ಸೇರಿದ ಸೋಲಾರ್ ತಂತಿ ಬೇಲಿ ನಾಶ ಮಾಡಿ ತೆಂಗು ಮತ್ತು ಮುಸುಕಿನ ಜೋಳ ಬೆಳಗಳನ್ನು ನಾಶ ಮಾಡಿವೆ.
ಕಾಡಾನೆ ಉಪಟಳದಿಂದ ಬೆಳೆ ನಾಶವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಪರಿಹಾರ ನೀಡಲು ವಿಳಂಬ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





