Mysore
28
scattered clouds

Social Media

ಗುರುವಾರ, 14 ಮೇ 2026
Light
Dark

ಹನೂರು| ಆಟೋ ಹಾಗೂ ಕಾರಿನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ತಾಲ್ಲೂಕಿನ‌ ಮಹದೇಶ್ವರಬೆಟ್ಟ ರಸ್ತೆಯ ತಾಳುಬೆಟ್ಟ–ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಆಟೋ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಾಯಗೊಂಡಿರುವ ಘಟನೆ ಜರುಗಿದೆ.

ತಾಲ್ಲೂಕಿನ ಮಹದೇಶ್ವರಬೆಟ್ಟ ಕಡೆಗೆ ತೆರಳುತ್ತಿದ್ದ ಆಟೋಗೆ ಮಾದಪ್ಪನ ದರ್ಶನ ಮುಗಿಸಿ ಎದುರಿನಿಂದ ಬಂದ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಮೈಸೂರಿನ ಮಂಡಿಮೊಹಾಲ್ಲಾದ 2 ವರ್ಷದ ಯಶಸ್ ಹಾಗೂ ಆಟೋದಲ್ಲಿದ್ದ ಮೈಸೂರಿನ ಕೂರ್ಗಳ್ಳಿಯ ಅರುಣ್ (30) ಮತ್ತು ಪವನ್ ‌ಎಂಬಾತರಿಗೆ ತೀವ್ರ ಗಾಯಗಳಾಗಿವೆ.

ತೀವ್ರ ಗಾಯಗೊಂಡಿದ್ದ ಗಾಯಾಳುಗಳಿಗೆ ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯ ತೀವ್ರತೆಗೆ ಆಟೋ ಮತ್ತು ಕಾರು ಎರಡೂ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ರಾಮಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!