Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಕೋಚಿಂಗ್ ದಂಧೆಗೆ ಕಡಿವಾಣ ಹಾಕಿ

ಓದುಗರ ಪತ್ರ

ಖಾಸಗಿ ಶಾಲೆಗಳು ೬ನೇ ತರಗತಿಯಿಂದಲೇ ಐಐಟಿ ಮತ್ತು ನೀಟ್ ತರಬೇತಿಯನ್ನು ಕಡ್ಡಾಯಗೊಳಿಸಿವೆ. ೧೧-೧೨ ವರ್ಷದ ಪುಟ್ಟ ಮಕ್ಕಳ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳ ಹೊರೆ ಹೇರುವ ಮೂಲಕ ಅವರ ಬಾಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ.

ಸರ್ಕಾರವು ನಿಗದಿಪಡಿಸಿದ ಶಾಲಾ ಪಠ್ಯಪುಸ್ತಕಗಳನ್ನು ಕಡೆ ಗಣಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ತಾವೇ ಖಾಸಗಿ ಏಜೆನ್ಸಿಯಿಂದ ಖರೀದಿಸಿದ ಪುಸ್ತಕಗಳನ್ನು ಸಾವಿರಾರು ರೂ. ನೀಡಿ ತೆಗೆದುಕೊಳ್ಳಬೇಕು ಎಂದು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದು, ಶೈಕ್ಷಣಿಕ ವರ್ಷ ಆರಂಭವಾದರೆ ಶಾಲಾ ಶುಲ್ಕ, ಪಠ್ಯಪುಸ್ತಕ ಶುಲ್ಕ ಮತ್ತಿತರ ವೆಚ್ಚಗಳಿಗೆ ದುಡಿಮೆಯ ಹಣ ಸಾಲದೇ ಸಾಲಮಾಡುವ ಪರಿಸ್ಥಿತಿಯಿದೆ.

ಇದರೊಂದಿಗೆ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ನೀಟ್ ತರಬೇತಿಯನ್ನೂ ಕಡ್ಡಾಯಗೊಳಿಸಿರುವುದರಿಂದ ಖಾಸಗಿ ಕೋಚಿಂಗ್ ಸೆಂಟರ್‌ಗಳಿಗೆ ದುಬಾರಿ ತರಬೇತಿ ಶುಲ್ಕ ಕಟ್ಟಲು ಪೋಷಕರು ಪರದಾಡಬೇಕಾಗಿದೆ.

ಕೋಚಿಂಗ್ ಮಾಫಿಯಾ ಮತ್ತು ಶೈಕ್ಷಣಿಕ ಅಸಮಾನತೆಯ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತನಿಖೆಯಾಗಬೇಕು. ಶಿಕ್ಷಣವು ಕೇವಲ ಕೋಚಿಂಗ್ ಪಡೆದವರ ಪಾಲಾಗದೆ, ಸರ್ಕಾರ ರೂಪಿಸಿರುವ ಶಾಲಾ ಪಠ್ಯಕ್ರಮದ ಆಧಾರದ ಮೇಲೆ ಎಲ್ಲರಿಗೂ ಸಮಾನವಾಗಿ ಸಿಗುವಂತಾಗಲು ಜಾಗತಿಕ ಒತ್ತಡ ನಿರ್ಮಾಣವಾಗಬೇಕು.

 – ಮಹದೇವ್ ಕೋಟೆ, ಬಹುಜನ ಚಳವಳಿ ಕಾರ್ಯಕರ್ತರು, ಮೈಸೂರು

Tags:
error: Content is protected !!