Mysore
25
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ತಮ್ಮ ವಿಶೇಷ ಅಧಿಕಾರ(ವಿಟೋ)ವನ್ನು ಬಳಸಿಕೊಂಡು ಸಂಪುಟವನ್ನು ವಜಾಗೊಳಿಸಿದ್ದಾರೆ.

ರಾಜ್ಯಪಾಲರು ತಮ್ಮ ಸಾಂವಿಧಾನಿಕ ವಿಟೋ ಬಳಸಿ ವಿಧಾನಸಭೆ ವಿಸರ್ಜಿಸಿ ಅಧಿಸೂಚನೆ ಹೊರಡಿಸಿದರು.

ಈ ಐತಿಹಾಸಿಕ ನಿರ್ಧಾರವನ್ನು ಭಾರತೀಯ ಸಂವಿಧಾನದ 174(2)(ಬಿ) ವಿಧಿಯ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ರಾಜ್ಯಪಾಲರ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ಅವರು ಹೊರಡಿಸಿದ ಈ ಆದೇಶದ ನಂತರ, ರಾಜ್ಯ ಸರ್ಕಾರ ಅಸ್ತಿತ್ವದಲ್ಲಿಲ್ಲ. ರಾಜ್ಯಪಾಲರ ಈ ಕಠಿಣ ಕ್ರಮವು ಬಂಗಾಳದ ರಾಜಕೀಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಸಂಪುಟ ಮತ್ತು ವಿಧಾನಸಭೆ ಎರಡೂ ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲ್ಪಟ್ಟಿವೆ.

Tags:
error: Content is protected !!