Mysore
31
few clouds

Social Media

ಗುರುವಾರ, 14 ಮೇ 2026
Light
Dark

ಮೈಸೂರಿನಲ್ಲಿ ಮುಂದುವರಿದ ಕಾಡುಪ್ರಾಣಿಗಳ ಉಪಟಳ

ಮೈಸೂರು: ಮೈಸೂರಿನಲ್ಲಿ ಕಾಡುಪ್ರಾಣಿಗಳ ಉಪಟಳ ಮುಂದುವರಿದಿದ್ದು, ಚಿರತೆಯೊಂದ ನಾಯಿ ಬೇಟೆಯಾಡಿರುವ ಘಟನೆ ಗೌರಿಶಂಕರನಗರದ ಗವಿಮಠದ ಹತ್ತಿರ ನಡೆದಿದೆ.

ರಾತ್ರೋರಾತ್ರಿ ಚಿರತೆಯೊಂದು ಮನೆ ಬಳಿ ಇದ್ದ ನಾಯಿಯನ್ನು ಎಳೆದೊಯ್ದಿದೆ. ಈ ದೃಶ್ಯ ಮನೆಯೊಂದರ ಸಮೀಪ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿಸಿದೆ.

ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಿಂದ ಈ ಚಿರತೆ ಬಂದಿರಬಹುದು ಎಂದು ಹೇಳಲಾಗುತ್ತಿದ್ದು, ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

 

Tags:
error: Content is protected !!