Mysore
32
scattered clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಸ್ವಾಗತಾರ್ಹ

ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸರ್ಕಾರ ಮುಂದಾಗಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ. ಮೂಲಸೌಕರ್ಯದ ಅಭಾವ, ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದ ಅಭಾವ ಮುಂತಾದ ಹಲವು ಕೊರತೆ ನ್ಯೂನತೆಗಳ ಗೂಡಾಗಿದ್ದ ಸರ್ಕಾರಿ ಶಾಲೆಗಳನ್ನು ಭೌತಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲವರ್ಧನೆ ಮಾಡಹೊರಟಿರುವ ಸರ್ಕಾರದ ಕ್ರಮ ನಿಜಕ್ಕೂ ಅಭಿನಂದನೀಯ.ಕರ್ನಾಟಕದ ಶಾಲಾ ೧ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಮಹತ್ವಪೂರ್ಣವಾದ ಕ್ರಾಂತಿಕಾರಕ ಹೆಜ್ಜೆ ಎಂದು ಹೇಳಬೇಕು. ಮುಖ್ಯಮಂತ್ರಿಗಳು ಘೋಷಿಸಿರುವ ಈ ಎಂಟು ಶಾಲಾ ಅಭಿವೃದ್ಧಿ ಗ್ಯಾರಂಟಿಗಳು ನಾಡಿನ ಮಕ್ಕಳ ಭವಿಷ್ಯವನ್ನು ಉತ್ತಮೋತ್ತಮವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.

 -ಸಿ.ಪಿ.ಸಿದ್ಧಾಶ್ರಮ, ವಿಜಯನಗರ , ಮೈಸೂರು

 

Tags:
error: Content is protected !!