Mysore
33
broken clouds

Social Media

ಶುಕ್ರವಾರ, 18 ಸೆಪ್ಟೆಂಬರ್ 2026
Light
Dark

ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್: ಮೈಸೂರಿನಿಂದ ಹೊರಡಲಿದೆ ವಿಶೇಷ ರೈಲು

ಮೈಸೂರು: ಕಲಿಯುಗದ ಕಾಮಧೇನು ಶ್ರೀ ಗುರುರಾಘವೇಂದ್ರಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ಕಾಕಿನಾಡ-ಮೈಸೂರು ಬೈ ವೀಕ್ಲಿ ಎಕ್ಸ್‌ಪ್ರೆಸ್‌ಗೆ ಅನುಮೋದನೆ ಸಿಕ್ಕಿದೆ.

ಮೇ.1.2026ರಿಂದ ಸಂಚಾರ, ಮೈಸೂರು, ಬೆಂಗಳೂರು, ಕಲ್ಯಾಣ ಕರ್ನಾಟಕದಿಂದ ಮಂತ್ರಾಲಯ ರೋಡ್‌ಗೆ ನೇರ ಸಂಪರ್ಕ ಕಲ್ಪಿಸುವ ರೈಲು ಇದಾಗಿದ್ದು, ಮಂತ್ರಾಲಯಕ್ಕೆ ಹೋಗುವವರೆಗೆ 33 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರ ಪಾಲಿಗೆ ಈ ರೈಲು ಸಾಕ್ಷಾತ್ ವರದಾನವೇ ಸರಿ ಎನ್ನುವಂತಾಗಿದೆ. ಮೈಸೂರಿನಿಂದ ಸಂಜೆ 5:05ಕ್ಕೆ (ಬೆಂಗಳೂರು ಸಿಟಿಯಿಂದ ರಾತ್ರಿ 8:25ಕ್ಕೆ) ಹೊರಡುವ ರೈಲು, ಮರುದಿನ ಮುಂಜಾನೆ ಸರಿಯಾಗಿ 3:28ಕ್ಕೆ ಮಂತ್ರಾಲಯ ರಸ್ತೆ ನಿಲ್ದಾಣವನ್ನು ತಲುಪಲಿದೆ.

ಅಂದು ಮುಂಜಾನೆಯೇ ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಮುಂಜಾನೆಯ ಶಾಂತ ವಾತಾವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಅನುಕೂಲವಾಗಲಿದೆ.

 

Tags:
error: Content is protected !!