ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಜನಗಣತಿಯ ಸಮಯದಲ್ಲಿ ಜನರು ಒದಗಿಸುವ ಎಲ್ಲಾ ಮಾಹಿತಿಯು ಸುರಕ್ಷಿತ ಮತ್ತು ಗೌಪ್ಯವಾಗಿರುತ್ತದೆ. ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ 2027 ರ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ತಮ್ಮ ಮಾಸಿಕ ರೇಡಿಯೋ ಭಾಷಣ ‘ಮನ್ ಕಿ ಬಾತ್’ ನಲ್ಲಿ ಮನವಿ ಮಾಡಿದರು.
ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಜನಗಣತಿಯು ಮುಖ್ಯವಾದದ್ದು, ಈ ಅಭಿಯಾನದಲ್ಲಿ ಪ್ರತಿಯೊಬ್ಬ ಭಾರತೀಯರೂ ಇದರ ಬಗ್ಗೆ ತಿಳಿದಿರಬೇಕು. “2027 ರ ಜನಗಣತಿಯನ್ನು ಡಿಜಿಟಲ್ ಭದ್ರತೆಯ ಮೂಲಕ ಈ ಡೇಟಾವನ್ನು ರಕ್ಷಿಸಲಾಗುತ್ತದೆ. ಜನರ ಮನೆಗಳಿಗೆ ಭೇಟಿ ನೀಡುವ ಗಣತಿದಾರರಿಗೆ ಮೊಬೈಲ್ ಆ್ಯಪ್ ಅಳವಡಿಸಲಾಗಿದ್ದು, ಅವರು ಎಲ್ಲರೊಂದಿಗೆ ಮಾತನಾಡಿ ಅಲ್ಲಿಯೇ ಮಾಹಿತಿಯನ್ನು ನಮೂದಿಸುತ್ತಾರೆ ಎಂದು ಹೇಳಿದರು.
ಈ ಬಾರಿ ಸಾರ್ವಜನಿಕರಿಗೆ ಒಂದು ವಿಶೇಷ ಅವಕಾಶ ನೀಡಲಾಗಿದ್ದು, ನಾಗರಿಕರು ಸ್ವತಹ ಆನ್‌ಲೈನ್ ಮೂಲಕ ಮಾಹಿತಿ ನೀಡಬಹುದು ಎಂದು ಮೋದಿ ಹೇಳಿದರು.





