Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಭಾರತವನ್ನು ನರಕಕೂಪ ಎಂದು ಹೀಯಾಳಿಸಿದ ಡೊನಾಲ್ಡ್ ಟ್ರಂಪ್‌: ವಿದೇಶಾಂಗ ಇಲಾಖೆ ಕಿಡಿ

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತವನ್ನು ನರಕಕೂಪ ಎಂದು ಉಲ್ಲೇಖಿಸಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಭಾರತ ಸರ್ಕಾರ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ಅಜ್ಞಾನಪೂರ್ವ ಹೇಳಿಕೆ ಎಂದು ಖಂಡಿಸಿದೆ.

ಈ ವಿವಾದಕ್ಕೆ ಕಾರಣವಾದದ್ದು ಟ್ರಂಪ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡ ಅಮೇರಿಕಾದ ಪ್ರಮುಖ ಸಂಪ್ರದಾಯವಾದಿ ಲೇಖಕ ಮತ್ತು ರೇಡಿಯೋ ನಿರೂಪಕ ಮೈಕೆಲ್‌ ಸ್ಯಾವೇಜ್‌ ಅವರ ಪಾಡ್‌ಕಾಸ್ಟ್‌.

ಅದರಲ್ಲಿ ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು.

ಟ್ರಂಪ್‌ ಟೀಕೆ ಕುರಿತು ರಣಧೀರ್‌ ಜೈಸ್ವಾಲ್‌ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದು, ಇಂತಹ ಹೇಳಿಕೆಗಳು ಅಜ್ಞಾನಪೂರ್ಣವಾಗಿದ್ದು, ಅಸಮಂಜಸ ಹಾಗೂ ಕೆಟ್ಟ ಅಭಿರುಚಿಯುಳ್ಳದ್ದಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಈ ಘಟನೆಯಿಂದ ಭಾರತದಲ್ಲಿ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಟ್ರಂಪ್‌ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದು, ಕೇಂದ್ರ ಸರ್ಕಾರವು ಈ ವಿಚಾರ ಕುರಿತು ಧ್ವನಿ ಎತ್ತಬೇಕು ಎಂದು ಆಗ್ರಹಿಸಿವೆ.

 

Tags:
error: Content is protected !!