Mysore
27
overcast clouds

Social Media

ಗುರುವಾರ, 18 ಜೂನ್ 2026
Light
Dark

ಕೊಡಗಿನ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಇಬ್ಬರನ್ನು ಬಂಧಿಸಲಾಗಿದೆ: ಶಾಸಕ ಪೊನ್ನಣ್ಣ ಮಾಹಿತಿ

ಬೆಂಗಳೂರು: ಕೊಡಗಿನ ಹೋಂ ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಬ್ಬರ ಬಂಧನ ಆಗಿದೆ ಎಂದು ಸ್ಥಳೀಯ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಅವರು, ವಿದೇಶಿ ಪ್ರಜೆ ಪ್ರವಾಸಕ್ಕೆ ಬಂದಿದ್ದರು. ಹೋಂಸ್ಟೇನಲ್ಲಿ ಕೆಲಸ ಮಾಡೋರು ಈ ಕೆಲಸ ಮಾಡಿದ್ದಾಗಿ ದೂರು ಕೊಡಲಾಗಿದೆ.

ಹೋಂಸ್ಟೇ ಮಾಲೀಕರು ಸರಿಯಾಗಿ ಸ್ಪಂದನೆ ನೀಡಿಲ್ಲ. ಬಳಿಕ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲು ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಎಸ್‌ಪಿ ತನಿಖೆ ಮಾಡುತ್ತಾ ಇದ್ದಾರೆ. ನಾನು ಎಸ್‌ಪಿ, ಐಜಿಯವರ ಬಳಿ ದೂರವಾಣಿಯಲ್ಲಿ ಮಾತಾಡಿದ್ದೇನೆ. ಕೊಡಗಿನಲ್ಲಿ ಹೀಗೆ ಆಗಿರೋದು ನೋವಾಗಿದೆ. ಕೊಡಗಿನಲ್ಲಿ ಹಿಂದೆ ಹೀಗೆ ಆಗಿಲ್ಲ. ಹೋಂ ಸ್ಟೇ ಬಗ್ಗೆಯೂ ತನಿಖೆ ಆಗಬೇಕು. ಪ್ರವಾಸಿಗರಿಗೆ ಮಾರ್ಗಸೂಚಿ ಕೊಡಬೇಕಾಗಿದೆ ಎಂದು ಹೇಳಿದರು.

Tags:
error: Content is protected !!