Mysore
22
overcast clouds

Social Media

ಸೋಮವಾರ, 08 ಜೂನ್ 2026
Light
Dark

ಚಾ.ನಗರ ಆಕ್ಸಿಜನ್‌ ದುರಂತ | ಸಂತ್ರಸ್ತರಿಗೆ ನೇಮಕ ಪತ್ರ ವಿತರಿಸಿದ ಸಿಎಂ

ಚಾಮರಾಜನಗರ : ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಸರ್ಕಾರಿ ಹುದ್ದೆಗಳ ನೇಮಕಾತಿ ಪತ್ರ ವಿತರಿಸಿದರು.

ಗುಂಡ್ಲುಪೇಟೆಯ ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಂಗಳವಾರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ 25 ಮಂದಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರ ಮಾಡಿದರು.

ಸಂಸತ್ರಸ್ತರಿಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಭೋಧನಾ ಆಸ್ಪತ್ರೆಯಲ್ಲಿ ವಿವಿಧ ವೃಂದದ ಉದ್ಯೋಗಗಳನ್ನು ನೀಡಲಾಗಿದೆ.

ಆಮ್ಲಜನಕ ಸಿಗದೆ ಧಾರುಣವಾಗಿ 34 ಮಂದಿ ಮೃತಪಟ್ಟಿದ್ದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಭಾರತ್‌ ಜೋಡೋ ಪಾದಯಾತ್ರೆಯ ವೇಳೆ ರಾಹುಲ್‌ ಗಾಂಧಿ ಅವರು ಮೃತಪಟ್ಟವರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದರು.

ಇದೀಗ ಅಂತಿಮವಾಗಿ ಸಂತ್ರಸ್ತರ ಬೇಡಿಕೆ ಈಡೇರಿದ್ದು, ಸಿಎಂ ಹಾಗೂ ಡಿಸಿಎಂ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ.

Tags:
error: Content is protected !!