Mysore
20
overcast clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಕೇದಾರನಾಥ ಧಾಮದಲ್ಲಿ ಯಾತ್ರಾರ್ಥಿಗಳಿಗೆ 24 ಗಂಟೆ ಬಿಸಿನೀರು: ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಘೋಷಣೆ

ಡೆಹರಾಡೂನ್:‌ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಶೀಘ್ರದಲ್ಲೇ ತಣ್ಣೀರಿನ ಬದಲಿಗೆ 24 ಗಂಟೆಗಳ ಬಿಸಿನೀರಿನ ಪೂರೈಕೆಯನ್ನು ಒದಗಿಸಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಘೋಷಣೆ ಮಾಡಿದ್ದಾರೆ.

ಪೈನ್‌ಸೂಜಿಗಳು ಮತ್ತು ಮ್ಯೂಲ್‌ ಸಗಣಿಯಿಂದ ತಯಾರಿಸಿದ ಬಯೋಮಾಸ್‌ ಪೆಲೆಟ್‌ಗಳನ್ನು ಬಳಸಿ ಕಾರ್ಯನಿರ್ವಹಿಸುವ ಗೀಸರ್‌ಗಳಿಂದ ಈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಇದು ದೇಶದಲ್ಲಿ ಈ ರೀತಿಯ ಮೊದಲ ಉಪಕ್ರಮವಾಗಿದ್ದು, ಇಷ್ಟು ಎತ್ತರದ ಸ್ಥಳದಲ್ಲಿ 24 ಗಂಟೆಗಳ ಕಾಲ ಬಿಸಿನೀರು ಲಭ್ಯವಾಗಲಿದೆ.

ಏಪ್ರಿಲ್.‌19ರ ಭಾನುವಾರದಿಂದ ಪ್ರಾರಂಭವಾಗಲಿರುವ ಚಾರ್‌ ಧಾಮ್‌ ಯಾತ್ರೆಗೆ ಆಗಮಿಸುವ ಭಕ್ತರಿಗೆ ಸಿಎಂ ಧಾಮಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಎಲ್ಲಾ ಯಾತ್ರಿಕರಿಗೆ ಸುರಕ್ಷಿತ ಮತ್ತು ಶುಭ ಯಾತ್ರೆಗಾಗಿ ಅವರು ಪ್ರಾರ್ಥಿಸಿದರು.

 

Tags:
error: Content is protected !!