Mysore
23
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ದಿಕ್ಕು ತಪ್ಪುತ್ತಿರುವ ಕೊಲ್ಲಿ ಸಮರ

ಓದುಗರ ಪತ್ರ

ಕೊಲ್ಲಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿದ್ದ ಯುದ್ಧದ ನಿಲುಗಡೆಗಾಗಿ ಕರೆಯಲಾಗಿದ್ದ ಪಾಕಿಸ್ತಾನ ನೇತೃತ್ವದ ಸಂಧಾನ ಸಭೆ ವಿಫಲವಾಗುವುದರೊಂದಿಗೆ ಕೊಲ್ಲಿಯಲ್ಲಿ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ.

ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ತನ್ನ ವಶಕ್ಕೆ ಪಡೆದಿರುವ ಅಮೆರಿಕ ಈ ಜಲಸಂಧಿಯನ್ನು ದಾಟುವ ಎಲ್ಲಾ ಹಡಗುಗಳನ್ನು ಹೊಡೆದು ಉರುಳಿಸುವುದಾಗಿ ಬೆದರಿಕೆ ಹಾಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಹುಚ್ಚಾಟಗಳಿಗೆ ಕೊನೆ ಮೊದಲೇ ಇಲ್ಲವಾಗಿವೆ. ಇದೀಗ ತಾನು ಏಸುಕ್ರಿಸ್ತನ ಅವತಾರವೆಂದು ಬಿಂಬಿಸಿಕೊಂಡು, ಮತ್ತೊಂದು ಕಪಿಚೇಷ್ಟೆ ಪ್ರಾರಂಭಿಸಿದ್ದು, ಇರಾನ್ ದೇಶವನ್ನು ವಿಶ್ವ ಭೂಪಟದಿಂದ ಅಳಿಸಿಹಾಕುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇವರ ಈ ಹುಚ್ಚಾಟಗಳಿಂದ ಇಡೀ ವಿಶ್ವವೇ ಆತಂಕಗೊಂಡಿದ್ದು, ಚೀನಾ, ರಷ್ಯಾ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಇನ್ನಾದರೂ ಗಾಢ ನಿದ್ರೆಯಿಂದ ಎಚ್ಚೆದ್ದು ಅಮೆರಿಕ ಅಧ್ಯಕ್ಷರಿಗೆ ತಕ್ಕ ಪಾಠ ಕಲಿಸ ಬೇಕು.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!