Mysore
26
clear sky

Social Media

ಮಂಗಳವಾರ, 21 ಏಪ್ರಿಲ 2026
Light
Dark

ಶ್ರವಣದೋಷ ಮೆಟ್ಟಿನಿಂತು ಸಾಧನೆ ಮಾಡಿದ ಮಹದೇವ ಪ್ರಸಾದ್ ಕೆ

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೊಡ್ಡಕವಲಂದೆ ಹೋಬಳಿಯ ದೊಡ್ಡಕವಲಂದೆ ಗ್ರಾಮದ ಕಾಂತರಾಜು ಮತ್ತು ಮಹೇಶ್ವರಿ ದಂಪತಿಗಳ ಪುತ್ರ ಮಹದೇವ ಪ್ರಸಾದ್ ಕೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ (PCMB)ದಲ್ಲಿ 600 ಅಂಕಗಳಿಗೆ 529 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಶ್ರವಣ ದೋಷ ಇರುವ ಮಹದೇವಪ್ರಸಾದ್ ಸಾಮಾನ್ಯ ಮಕ್ಕಳನ್ನ ಮೀರಿಸಿ ಅತ್ಯಧಿಕ ಅಂಕ ಗಳಿಸಿರುವುದು ಗಮನಾರ್ಹವಾಗಿದ್ದು, ಇವರು ಇಂಜಿನಿಯರ್ ಆಗಬೇಕು ಎಂಬ ಮಹಾದಾಸೆ ಹೊಂದಿದ್ದಾರೆ.

ಈತನ ಕನಸಿಗೆ ಅಡ್ಡವಾಗಿರುವ ಆರ್ಥಿಕ ಪರಿಸ್ಥಿತಿ. ಈತನ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಮಹೇಶ್ವರಿ ಬದನಗುಪ್ಪೆ ಕುಕ್ಕರ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಕಾಂತರಾಜು ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದಾರೆ.

ಅವನು ಚೆನ್ನಾಗಿ ಓದಿ ಒಳ್ಳೆಯ ಆಫೀಸರ್ ಆಗಬೇಕು ಎಂಬುದು ಪೋಷಕರ ಮಹದಾಸೆಯಾಗಿದೆ.

Tags:
error: Content is protected !!