Mysore
23
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.

ರೈಲು ಸಂಖ್ಯೆ 06251 ಮೈಸೂರು–ಜಲ್ಪೈಗುಡಿ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ ಮೈಸೂರಿನಿಂದ ಏ.17 ಮತ್ತು 24ಕ್ಕೆ ಹೊರಡಲಿದೆ.

ವಾಪಸಾಗುವಾಗ ರೈಲು ಸಂಖ್ಯೆ 06252 ಜಲ್ಪೈಗುರಿ ಜಂಕ್ಷನ್-ಮೈಸೂರು ವಿಶೇಷ ರೈಲು ಅಲ್ಲಿಂದ ಏ.20 ಮತ್ತು 27 ರಂದು ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

ಎರಡೂ ರೈಲುಗಳು 20 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 1 ಫಸ್ಟ್ ಎಸಿ 2-ಟೈಯರ್, 2 ಎಸಿ 3-ಟೈಯರ್, 10 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್ಡಿ ಬೋಗಿಗಳು ಸೇರಿವೆ.

ರೈಲುಗಳು ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಬಂಗಾರಪೇಟೆ, ಜೋಲಾರ್‌ಪೇಟ್, ಕಟ್ಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಹೇಂದ್ರಿ, ಸಿಂಹಾಚಲಂ ನಾರ್ಥ್, ಕೋಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸಾ, ಬ್ರಹ್ಮಪುರ್, ಬಾಲುಗಾಂ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಜಾಜ್‌ಪುರ್ ಕೆ ರೋಡ್, ಭದ್ರಕ್, ಬಾಲಸೋರ್, ಖರಗ್‌ಪುರ್, ಆಂಡುಲ್, ದಾಂಕುನಿ, ಬರ್ಧಮಾನ್, ಬೋಲ್‌ಪುರ್, ರಾಂಪುರ್ ಹಾಟ್, ನ್ಯೂ ಫರಕ್ಕಾ, ಮಾಲ್ದಾ ಟೌನ್, ಕಿಶನ್‌ಗಂಜ್ ನಿಲ್ದಾಣಗಳಲ್ಲಿ ಎರಡು ದಿಕ್ಕುಗಳಲ್ಲಿ ನಿಲುಗಡೆ ಹೊಂದಿದೆ.

Tags:
error: Content is protected !!