Mysore
35
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಓದುಗರ ಪತ್ರ: ಯುದ್ಧ ಪೂರ್ಣ ನಿಲ್ಲಲಿ, ಶಾಂತಿ ನೆಲೆಸಲಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ   ಅಲ್ಪ ವಿರಾಮವನ್ನು ಘೋಷಿಸಲಾಗಿದೆ.  ಈ  ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ.

ಅಮೆರಿಕ ಅಧ್ಯಕ್ಷ  ಟ್ರಂಪ್ ಅವರು ಬುಧವಾರ ಬೆಳಗಿನ ಜಾವ ಇರಾನಿನ ಮೇಲೆ ಭೀಕರಬಾಂಬ್  ದಾಳಿ   ನಡೆಸುವುದಾಗಿ  ಬೆದರಿಕೆ ಹಾಕಿದ್ದು, ಕಡೇ ಕ್ಷಣದಲ್ಲಿ ಕದನ ವಿರಾಮ ಘೋಷಿಸಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಮೂರು ದೇಶಗಳ ಕದನ ಅಲ್ಪ ವಿರಾಮಕ್ಕೆ  ಸಂಬಂಧಿಸಿದಂತೆ ೧೦ ಅಂಶಗಳನ್ನು ಒಳಗೊಂಡ ಪ್ರಸ್ತಾವ ಮುಂದಿಟ್ಟಿರುವ ಇರಾನ್, ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ    ಮಧ್ಯಸ್ಥಿಕೆ ಸಭೆಯಲ್ಲಿ ಭಾಗವಹಿಸುವ ದೇಶಗಳು ಪೂರ್ಣ ಪ್ರಮಾಣದ ಯುದ್ಧ ವಿರಾಮ ಘೋಷಿಸಲು, ಸದಾ ಶಾಂತಿ  ನೆಲೆಸಲು ಮತ್ತು ಉಳಿಸುವ ನಿಟ್ಟಿನಲ್ಲಿ  ಮಾತುಕತೆ ನಡೆಸಬೇಕು.

 -ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು

Tags:
error: Content is protected !!