Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಯುದ್ಧ ಅಂತ್ಯಗೊಂಡಿಲ್ಲ: ಕದನ ವಿರಾಮವಷ್ಟೇ ಎಂದ ಮೊಜ್ತಬಾ ಖಮೇನಿ

ಟೆಹರಾನ್:‌ ಇರಾನ್‌ ಮೇಲಿನ ಯುದ್ಧಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ವಾರಗಳ ಕದನ ವಿರಾಮ ಘೋಷಣೆ ಮಾಡಿದ್ದಾರೆ.

ಕದನ ವಿರಾಮ ಒಪ್ಪಿಕೊಂಡಿರುವ ಇರಾನ್‌ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ತನ್ನ ಎಲ್ಲಾ ಮಿಲಿಟರಿ ಘಟಕಗಳಿಗೆ ದಾಳಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಯುದ್ಧ ಅಂತ್ಯವಾಗಿಲ್ಲ, ಕದನ ವಿರಾಮವಷ್ಟೇ ಎಂದು ತಿಳಿಸಿದ್ದಾರೆ.

ಕದನ ವಿರಾಮವು ಯುದ್ಧದ ಅಂತ್ಯವನ್ನು ಸೂಚಿಸುವುದಿಲ್ಲ. ಶತ್ರುಗಳಾದ ಅಮೇರಿಕಾ ಅಥವಾ ಇಸ್ರೇಲ್‌ ಯಾವುದ ರೀತಿಯಲ್ಲಿ ತಪ್ಪಾಗಿ ವರ್ತಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ.28ರಂದು ಅಮೇರಿಕಾ ಮತ್ತು ಇಸ್ರೇಲ್‌ ದೇಶವು ಇರಾನ್‌ ವಿರುದ್ಧ ಜಂಟಿ ದಾಳಿ ನಡೆಸಿ, ಯುದ್ಧದ ಮೊದಲ ದಿನದಂದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದಿತ್ತು. ಕಳೆದ 39 ದಿನಗಳಲ್ಲಿ ದೇಶಾದ್ಯಂತ ಹಲವಾರು ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ.

Tags:
error: Content is protected !!