Mysore
31
few clouds

Social Media

ಮಂಗಳವಾರ, 12 ಮೇ 2026
Light
Dark

ಆಟೋ ಗ್ಯಾಸ್‌ ಕೊರತೆ ; ವದಂತಿಗಳಿಗೆ ಕಿವಿಗೊಡದಂತೆ ಸಲಹೆ

ಬೆಂಗಳೂರು : ರಾಜ್ಯದಲ್ಲಿರುವ ಆಟೋ ಮಾಲೀಕರು ಮತ್ತು ಚಾಲಕರು ಆತಂಕಕ್ಕೆ ಒಳಗಾಗಬಾರದು ಹಾಗೂ ಆಟೋ ಗ್ಯಾಸ್ ಕೊರತೆಯ ಬಗ್ಗೆ ಯಾವುದೇ ವದಂತಿಗಳ ಬಗ್ಗೆ ಕಿವಿಗೊಡಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಲಹೆ ಮಾಡಿದೆ.

ಸರ್ಕಾರಿ ಗ್ಯಾಸ್ ಸರಬರಾಜು ಸಂಸ್ಥೆಗಳಾದ ಐಒಸಿ, ಬಿಪಿಸಿ ಮತ್ತು ಎಚ್‍ಪಿಸಿಗಳ ಮೂಲಕ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡಲಾಗುತ್ತಿತ್ತು. ಪ್ರಸ್ತುತ ಈ ಮೂರು ಸಂಸ್ಥೆಗಳ ಮೂಲಕ 83.58 ಮೆಟ್ರಿಕ್ ಟನ್ ಗ್ಯಾಸ್‍ನ್ನು ಚಿಲ್ಲರೆ ಮಾರಾಟ ಮಳಿಗೆ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜ್.ಬಿ.ಇ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಆಟೋ ಗ್ಯಾಸ್ ಬಂಕ್‍ಗಳಲ್ಲಿ ಆಟೋ ಗ್ಯಾಸ್ ದಾಸ್ತಾನು ಕೊರತೆಯಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಆಟೋ ಮಾಲೀಕರು ಮತ್ತು ಆಟೋ ಚಾಲಕರು ಆಟೋ ಗ್ಯಾಸ್ ಬಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಕೊರತೆಯಾಗಿದೆ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಐದು ದಿನಗಳಿಂದ ಈ ಮೂರು ಸಂಸ್ಥೆಗಳಿಂದ ನಿರಂತರವಾಗಿ ಗ್ಯಾಸ್ ಸರಬರಾಜು ಮಾಡಲಾಗುತ್ತಿದೆ. ಏ.2ರಂದು 87.78 ಮೆಟ್ರಿಕ್ ಟನ್, ಏ.3ರಂದು 86.05 ಮೆಟ್ರಿಕ್ ಟನ್, ಏ.4ರಂದು 84.80 ಮೆಟ್ರಿಕ್ ಟನ್, ಏ.5ರಂದು 94.11 ಮೆಟ್ರಿಕ್ ಟನ್ ಹಾಗೂ ಏ.6ರಂದು 83.58 ಮೆಟ್ರಿಕ್ ಟನ್ ಆಟೋ ಗ್ಯಾಸ್ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ

 

Tags:
error: Content is protected !!