Mysore
23
overcast clouds

Social Media

ಮಂಗಳವಾರ, 26 ಮೇ 2026
Light
Dark

ಇರಾನ್‌ ಮೇಲೆ ಅಮೇರಿಕಾ ಭೀಕರ ದಾಳಿ: ಟಾಪ್‌ ಕಮಾಂಡರ್‌ಗಳ ಹತ್ಯೆ

ಟೆಹರಾನ್:‌ ಟೆಹರಾನ್‌ ಮೇಲೆ ಅಮೇರಿಕಾ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ.

ಈ ಕುರಿತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಹಿತಿ ನೀಡಿದ್ದು, ಇರಾನ್‌ನ ಹಲವು ಉನ್ನತ ಕಮಾಂಡರ್‌ಗಳನ್ನು ನಿರ್ಮೂಲನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ತನ್ನ ಪಡೆಯನ್ನು ಅವಿವೇಕತನದಿಂದ ಮತ್ತು ಕಳಪೆಯಾಗಿ ಮುನ್ನಡೆಸಿದ ಇರಾನ್‌ನ ಮಿಲಿಟರಿ ಪಡೆಯ ಉನ್ನತ ನಾಯಕರನ್ನು ನಿರ್ಮೂಲನೆ ಮಾಡಿದ್ದೇವೆ ಎಂದು ಬರೆಯುತ್ತಾ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಈ ವಿಡಿಯೋದಲ್ಲಿ ವಿಮಾನಗಳ ಭಾರೀ ಶಬ್ಧಗಳು ಮತ್ತು ಗಮನಾರ್ಹ ಸ್ಫೋಟಗಳು ಕಂಡುಬಂದಿವೆ. ಆದರೆ ಹತ್ಯೆಯಾದ ಟಾಪ್‌ ಕಮಾಂಡರ್‌ಗಳ ಪಟ್ಟಿಯನ್ನ ಶ್ವೇತಭವನ ಇನ್ನೂ ಬಿಡುಗಡೆ ಮಾಡಿಲ್ಲ. ಇರಾನ್‌ ಕೂಡ ಕಮಾಂಡರ್‌ಗಳ ಸಾವನ್ನು ದೃಢಪಡಿಸಿಲ್ಲ.

 

 

 

Tags:
error: Content is protected !!