Mysore
24
overcast clouds

Social Media

ಶನಿವಾರ, 04 ಜುಲೈ 2026
Light
Dark

ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ: ಸಿದ್ಧಗಂಗಾ ಮಠದಲ್ಲಿ ಸಂಭ್ರಮ

ತುಮಕೂರು: ಸಿದ್ಧಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿಂದು ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ.

ಇಂದು ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಶುರುವಾಗಿದ್ದು, ಶ್ರೀಗಳ ಗದ್ದುಗೆಗೆ ಫಲ ಫುಷ್ಪಗಳಿಂದ ಅಲಂಕಾರ ಮಾಡಲಾಗಿದೆ.

ಶಿವಕುಮಾರ ಶ್ರೀಗಳ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಮಠದಲ್ಲಿ ರುದ್ರಾಕ್ಷಿ ಮಂಟಪ ಮೆರವಣಿಹೆ ಮಾಡಲಾಯಿತು. ರುದ್ರಾಕ್ಷಿ ಮಂಟಪದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿ ಇರಿಸಿ ಮೆರವಣಿಗೆ ಮಾಡಿದ್ದು, ಶಿವಕುಮಾರ ಶ್ರೀಗಳ ಗದ್ದುಗೆಯಿಂದ ಹೊಸ ಮಠದ ಬಸವಣ್ಣರ ಪುತ್ಥಳಿವರೆಗೂ ಮೆರವಣಿಗೆ ನಡೆಯಿತು. ಕಳಶ ಹೊತ್ತ ಮಹಿಳೆಯರು ರುದ್ರಾಕ್ಷಿ ಮಂಟಪಕ್ಕೆ ಸ್ವಾಗತ ಕೋರಿದರು.

 

Tags:
error: Content is protected !!