Mysore
27
scattered clouds

Social Media

ಮಂಗಳವಾರ, 26 ಮೇ 2026
Light
Dark

ಓದುಗರ ಪತ್ರ | ಕೆರೆಗಳ ಉಳಿವಿಗೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿ

dgp murder case

ರಾಜ್ಯದ ಜಲಮೂಲಗಳ ಸ್ಥಿತಿ ಇಂದು ಶೋಚನೀಯವಾಗಿದೆ. ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಅತಿಕ್ರಮಣದಿಂದಾಗಿ ನಗರ ಪ್ರದೇಶದ ಕೆರೆಗಳ ವಿಸ್ತೀರ್ಣ ಶೇ.60ರಷ್ಟು ಕುಗ್ಗಿದೆ. ಈ ಹಿನ್ನೆಲೆಯಲ್ಲಿ ಜಿಯೋ ಫೆನ್ಸಿಂಗ್ ಮತ್ತು ಮಾಹಿತಿ ಫಲಕಗಳ ಅಳವಡಿಕೆ ಕೇವಲ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ಕೆರೆಗಳ ಉಳಿವಿಗಾಗಿ ಇರುವ ಡಿಜಿಟಲ್ ಕವಚ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಅಡಿಯಲ್ಲಿ ಕೆರೆಗಳಿಗೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ ಅನುಷ್ಠಾನದಲ್ಲಿ ಹಿನ್ನಡೆಯಾಗುತ್ತಿದೆ. ರಾಜ್ಯ ಸರ್ಕಾರವು ಕೂಡಲೇ ಎಲ್ಲಾ ಕೆರೆಗಳ ನಕ್ಷೆಯನ್ನು ‘ದಿಶಾಂಕ್’ ಅಪ್ಲಿಕೇಶನ್‌ನಲ್ಲಿ ಕಡ್ಡಾಯವಾಗಿ ಅಪ್ಲೇಟ್ ಮಾಡಬೇಕು. ಹೀಗಾಗಿ ಪ್ರತಿ ಕೆರೆಯ ಬದಿಯಲ್ಲಿ ಸರ್ವೆ ನಂಬ‌ ವಿಸ್ತೀರ್ಣ ಮತ್ತು ಅತಿಕ್ರಮಣ ಮಾಡಿದರೆ ಆಗುವ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ಫಲಕ ಹಾಕುವುದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಕೆರೆ ಸಂರಕ್ಷಣೆ ಎಂಬುದು ಕೇವಲ ಒಂದು ಇಲಾಖೆಯ ಕೆಲಸವಾಗದೆ ಜನ ಚಳವಳಿಯಾಗಬೇಕಿದೆ.
ಡಾ. ಎಚ್.ಕೆ. ವಿಜಯಕುಮಾರ, ಬೆಂಗಳೂರು

Tags:
error: Content is protected !!