Mysore
24
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಗುಂಡ್ಲುಪೇಟೆ: ಮದ್ದೂರು ವಲಯದಲ್ಲಿ ಮೃತ ಹುಲಿ ಕಳೇಬರ ಪತ್ತೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಗುಡಿ ಬೀಟ್ ಬಳಿ ಹೆಣ್ಣು ಹುಲಿ ಕಳೇಬರ ಸಿಕ್ಕಿದ್ದು ಮೇಲ್ನೋಟಕ್ಕೆ ವಯೋಸಹಜ ಸಾವಾಗಿರುವಂತೆ ಭಾಸವಾಗುತ್ತಿದೆ ಎಂದು ವಲಯಾಧಿಕಾರಿ‌ ಪುನೀತ್ ತಿಳಿಸಿದರು.

ಹುಲಿಗೆ ವಯಸ್ಸಾಗಿದ್ದು, ಹಲ್ಲು ಸವೆದಿದೆ. ವಯೋಸಹಜ ಸಾವಾಗಿರುವಂತೆ‌ ಕಾಣುತ್ತಿದ್ದು ಬುಧವಾರ ಪಶುವೈದ್ಯರು ಶವ ಪರೀಕ್ಷೆ ನಡೆಸಿದ ನಂತರ ಮಾಹಿತಿ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ದೂರು ವಲಯದಲ್ಲಿಯೇ ಸೋಮವಾರ ಬೇರಂಬಾಡಿ ಚನ್ನಮಲ್ಲಿಪುರ ಎಲ್ಲೆಯಲ್ಲಿ ಹುಲಿಯೊಂದು ಸೆರೆಯಾಗಿತ್ತು. ಒಂದೇ ದಿನದಲ್ಲಿ ಅದೇ ವಲಯದಲ್ಲಿ ಹುಲಿ ಮೃತಪಟ್ಟಿರುವ ಘಟನೆ ನಡೆದಿದೆ.

Tags:
error: Content is protected !!