Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಅಮೇರಿಕಾದ ಅಕ್ಕ ವಿಶ್ವ ಕನ್ನಡ ಸಮ್ಮೇಳನ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ ಆಯ್ಕೆ

ಬೆಂಗಳೂರು: ಅಮೇರಿಕಾದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರಮವಾಗಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಸ್ಥೆಯ 25ನೇ ರಜತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಐತಿಹಾಸಿಕ ಸಂಭ್ರಮ ಮಹೋತ್ಸವಕ್ಕೆ ರಿಷಬ್‌ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್.‌4ರಿಂದ 6ರವರೆಗೆ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಅಕ್ಕ ಸಂಸ್ಥೆಯು ಕನ್ನಡ ಭಾಷೆ ಸಂಸ್ಕೃತಿ ಮೇಲಿನ ಪ್ರೀತಿ, ವಿಶಿಷ್ಟ ಕಲಾತ್ಮಕ ದೃಷ್ಟಿಕೋನ ಹೊಂದಿರುವ ರಿಷಬ್‌ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಉತ್ತರ ಅಮೇರಿಕಾದ ಕನ್ನಡ ಸಮುದಾಯಕ್ಕೆ ಸಂತಸ ತಂದಿದೆ ಎಂದು ಹೇಳಿದೆ.

 

 

Tags:
error: Content is protected !!