Mysore
23
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ಹಾರ್ಮುಜ್‌ ಜಲಸಂಧಿ ಸಂಪೂರ್ಣ ಓಪನ್‌ ಮಾಡಿ: ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಟೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್:‌ ಹಾರ್ಮುಜ್‌ ಜಲಸಂಧಿಯನ್ನು 48 ಗಂಟೆಯೊಳಗೆ ಸಂಪೂರ್ಣ ಓಪನ್‌ ಮಾಡಬೇಕು ಎಂದು ಇರಾನ್‌ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗಡುವು ನೀಡಿದ್ದಾರೆ.

ತೈಲವನ್ನು ಸಾಗಿಸುವ ಹಾರ್ಮುಜ್‌ ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ ಇರಾನ್‌ ಮತ್ತೆ ತೆರೆಯಬೇಕು. ಇಲ್ಲದಿದ್ದರೆ ಇರಾನ್‌ನ ವಿದ್ಯುತ್‌ ಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ಟ್ರಂಪ್‌ ಅವರ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ಸೇನೆಯು, ಈ ಪ್ರದೇಶದಲ್ಲಿ ಅಮೇರಿಕಾಗೆ ಸೇರಿದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ಉಪ್ಪು ನೀರಿನ ನಿರ್ಮೂಲನಾ ಮೂಲ ಸೌಕರ್ಯಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವುದಾಗಿ ಬೆದರಿಕೆ ಹಾಕಿದೆ.

ಶತ್ರುಗಳು ಇರಾನ್‌ನ ಇಂಧನ ಮೂಲಸೌಕರ್ಯಗಳನ್ನು ದಾಳಿಗೆ ಗುರಿಯಾಗಿಸಿಕೊಂಡರೆ, ಅಮೇರಿಕಾ ಮತ್ತು ಈ ಪ್ರದೇಶದ ಆಡಳಿತಕ್ಕೆ ಸೇರಿದ ಎಲ್ಲಾ ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನಾ ಮೂಲಸೌಕರ್ಯಗಳನ್ನು ಟಾರ್ಗೆಟ್‌ ಮಾಡಲಾಗುವುದು ಎಂದು ಇರಾನಿನ ಮಿಲಿಟರಿ ಕಾರ್ಯಾಚರಣೆಯ ಕಮಾಂಡ್‌ ಖತಮ್‌ ಅಲ್‌-ಅನ್ಬಿಯಾ ಕೌಂಟರ್‌ ಕೊಟ್ಟಿದ್ದಾರೆ.

 

Tags:
error: Content is protected !!